ಮಹಾಲಿಂಗಪುರ ವಲಯಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದ ಢವಳೇಶ್ವರ ಗ್ರಾಮದ ಢವಳನಾಥ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು. ಸಂಸ್ಥೆ ಅಧ್ಯಕ್ಷ ಪಿ.ಜಿ. ಬಂಗಿ, ಮುಖ್ಯಶಿಕ್ಷಕ ಕೆ.ಜಿ. ನೆಗಿನಾಳ, ದೈಹಿಕ ಶಿಕ್ಷಣ ಶಿಕ್ಷಕ ಸಿ.ವಿ.ದಾದಾನಟ್ಟಿ ಇದ್ದಾರೆ. 
ಜಿಲ್ಲೆ

ಸತತ ೧೫ ವರ್ಷ ಖೋಖೋದಲ್ಲಿ ಬಾಲಕರ ಗೆಲುವು

ಮಹಾಲಿಂಗಪುರ: ಸಮೀಪದ ಅಕ್ಕಿಮರಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮಹಾಲಿಂಗಪುರ ವಲಯಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಢವಳೇಶ್ವರ ಗ್ರಾಮದ ಢವಳನಾಥ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಬಾಲಕರ ಮತ್ತು ಬಾಲಕಿಯರ ಖೋ ಖೋ ಆಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕರು ಸತತ ೧೫ ವರ್ಷ ಗೆಲುವು ಪಡೆದು ದಾಖಲೆ ನಿರ್ಮಿಸಿದ್ದಾರೆ

ವೈಯಕ್ತಿಕ ವಿಭಾಗದಲ್ಲಿ ೮೦ ಮೀ. ಹರ್ಡಲ್ಸ್ನಲ್ಲಿ ಸೌಮ್ಯಾ ಪಟ್ಟೇದ ಪ್ರಥಮ, ಮನೋಜ ಉಳ್ಳಾಗಡ್ಡಿ ತೃತೀಯ, ಎತ್ತರ ಜಿಗಿತದಲ್ಲಿ ಸೀಮಾ ಕೌಜಲಗಿ ದ್ವಿತೀಯ, ಸಚಿನ್ ಕಿಲಾರಿ ತೃತೀಯ, ಸವಿತಾ ಪಾಶ್ಚಾಪುರ ೬೦೦ ಮೀ. ಓಟದಲ್ಲಿ ತೃತೀಯ ಮತ್ತು ಬಾಲಕಿಯರ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆಗೈದ ಮಕ್ಕಳು ೩೭ ಅಂಕಗಳೊAದಿಗೆ ಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ತಂದುಕೊಟ್ಟಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಸಿ.ವಿ. ದಾದಾನಟ್ಟಿ ತರಬೇತಿ ನೀಡಿದ್ದರು

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ಪಿ.ಜಿ. ಬಂಗಿ, ಮುಖ್ಯಶಿಕ್ಷಕ ಕೆ.ಜಿ. ನೆಗಿನಾಳ, ಶಿಕ್ಷಕರಾದ ಅನೀಲ ಚೌರಡ್ಡಿ, ದಾನೇಶ ಹುಚನಟ್ಟಿ, ಭಾಗ್ಯಶ್ರೀ ಕಲ್ಲಪ್ಪಗೌಡ್ರ, ಎಲ್.ಎಸ್. ಅರಕೇರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.