ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಸುವಂತೆ ತಹಸೀಲ್ದಾರ್ ಆರ್.ಎಚ್.ಬಾಗವಾನಗೆ ಅಳಗವಾಡಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಎಚ್.ಕೆ. ಗುರವ, ಸಿದ್ದು ನಾಗನೂರು, ಪಾರೀಶ ಉಗಾರ ಇತರರಿದ್ದರು. 
ಜಿಲ್ಲೆ

ಮಹಾರಾಜರ ಹಂತಕರನ್ನು ಶಿಕ್ಷಿಸುವಂತೆ ಪ್ರತಿಭಟನೆ

ರಾಘವೇಂದ್ರಗೌಡ ಭೀ ಪಾಟೀಲ್

ಅಳಗವಾಡಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಕಾಮಕುಮಾರ ನಂದಿ ಮುನಿ ಹತ್ಯೆ ಖಂಡಿಸಿ ಶನಿವಾರ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೊಲೆಗಾರರಿಗೆ ಕಠಿಣ ಶಿಕ್ಷೆ ನೀಡುವಂತೆ ರಾಯಬಾಗ ತಹಸೀಲ್ದಾರ್ ಆರ್.ಎಚ್. ಬಾಗವಾನ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಪಂ ಮಾಜಿ ಉಪಾಧ್ಯಕ್ಷ ಪಾರೀಶ ಉಗಾರ ಮಾತನಾಡಿ, ಜೈನ ಧರ್ಮ ಬದುಕು, ಬದುಕಲು ಬಿಡು ಎನ್ನುತ್ತದೆ. ಸಕಲರ ಒಳಿತು ಬಯಸುವ ಮುನಿ ಹತ್ಯೆ ಖಂಡನೀಯ. ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಸಬೇಕು ಎಂದರು. ನಿವೃತ್ತ ಪ್ರಾಧ್ಯಾಪಕ ಎಚ್.ಕೆ. ಗುರವ ಮಾತನಾಡಿ, ಸರ್ವಸಂಗ ಪರಿತ್ಯಾಗಿ ಜೀವನ ನಡೆಸುವ ಮುನಿ ಹತ್ಯೆಯಿಂದ ದೇಶ ತಲೆ ತಗ್ಗಿಸುವಂತಾಗಿದೆ. ಇಂತಹ ಘಟನೆಗಳು ಸಮಾಜದಲ್ಲಿ ನಡೆಯದಂತೆ ಸಾರ್ವಜನಿಕವಾಗಿ ಶಿಕ್ಷ ನೀಡಬೇಕು ಎಂದು ಒತ್ತಾಯಿಸಿದರು. ಸಿದ್ದು ನಾಗನೂರು ಮಾತನಾಡಿದರು. ಸಿಪಿಐ ರವಿಚಂದ್ರ ಡಿ., ಪಿಎಸ್‌ಐಗಳಾದ ಗಿರಿಮಲ್ಲ ಉಪ್ಪಾರ, ಜ್ಯೋತಿ ವಾಲಿಕರ, ಐಶ್ವರ್ಯ ಹಾಗೂ ಪೊಲೀಸ್ ಸಿಬ್ಬಂದಿ ಸೂಕ್ತ ರಕ್ಷಣೆ ನೀಡಿದರು. ಅಣ್ಣಾಸಾಬ ಖೇಮಲಾಪೂರೆ, ಮಹಾದೇವ ಶಿರಗೂರೆ ಇತರರಿದ್ದರು.