ಗೋಕರ್ಣ: ಮಹಾಬಲೇಶ್ವರ ಮಂದಿರದಿಂದ ವಾರ್ಷಿಕವಾಗಿ ನಡೆಯುವ ಕದಿರು ಹರಣೋತ್ಸವ ಸೋಮವಾರ ಪ್ರಾತಃ ಕಾಲದಲ್ಲಿ ಜರುಗಿತು. ಕರೊನಾ ಹಿನ್ನೆಲೆಯಲ್ಲಿ ವರ್ಷದಂತೆ ಮಹಾಬಲೇಶ್ವರ ಮೂರ್ತಿ ಉತ್ಸವ ನಡೆಯಲಿಲ್ಲ. ಭತ್ತ ಬೆಳೆದ ದೇವರ ಗದ್ದೆಗೆ ಶ್ರೀದೇವರ ಪಾದುಕೆಯನ್ನು ತಂದು ಅವುಗಳಿಗೆ ರೈತರು ಕೊಯ್ದ ಭತ್ತದ ನವ ಧಾನ್ಯ ಕದಿರನ್ನು ಮಿರ್ಜಾನ್ ಸೀಮೆ ನಾರ್ಡR ಮನೆತನದ ವಿವೇಕ ನಾರ್ಡR ಮುಂತಾದವರ ನೇತೃತ್ವದಲ್ಲಿ ಪಾದುಕೆಗೆ ಸಮರ್ಪಿಸಲಾಯಿತು.
ನಾರ್ಡ ಮನೆತನಕ್ಕೆ ಭೇಟಿಯಿತ್ತ ಪಾದುಕೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಭಾಗದಲ್ಲಿ ರೈತರು ತಾವು ಬೆಳೆದ ಧಾನ್ಯವನ್ನು ಮೊದಲು ದೇವರಿಗೆ ಅರ್ಪಿಸಿ ಕದಿರು ಹಬ್ಬ ಆಚರಿಸಲಾಗುತ್ತದೆ. ನಂತರ ಹೊಸ ಕದಿರನ್ನು ದೇವಾಲಯಕ್ಕೆ ತಂದು ವೇ. ಶಿವ ಭಟ್ಟ ಷಡಕ್ಷರಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಉತ್ತಮ ಬೆಳೆಗೆ ಪ್ರಾರ್ಥಿಸಿ, ಭಕ್ತರಿಗೆ ಪ್ರಸಾದ ರೂಪದಲ್ಲಿ ಕದಿರು ವಿತರಿಸಲಾಯಿತು.