ಜಿಲ್ಲೆ

ಮಹಾದೇವರ ವಾರ್ಷಿಕೋತ್ಸವ

ಗೋಣಿಕೊಪ್ಪ: ಕಿರುಗೂರು ಗ್ರಾಮದ ಮಹಾದೇವರ ವಾರ್ಷಿಕೋತ್ಸವ ಐದು ದಿನ ಭಕ್ತಿಭಾವದಿಂದ ನಡೆಯಿತು. ದೇವರ ತಡುಂಬು ಪ್ರದಕ್ಷಿಣೆ ಮೂಲಕ ಸಂಪನ್ನಂಗೊಂಡಿತು. ದೇವರ ನೃತ್ಯ ಬಲಿ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಿತು.


ಮಂಗಳವಾರ ಕೊಡಿಮರ ನಿಲ್ಲಿಸುವ ಆಚರಣೆ ಮೂಲಕ ಆರಂಭಗೊಂಡ ಹಬ್ಬದಲ್ಲಿ ದೇವರ ಬಲಿ, ಉಷಾ ಪೂಜೆ, ನವ ಕಳಸ ಪೂಜೆ, ಕಲಾಭಿಷೇಕ, ತೂಚಂಬಲಿ ಪೂಜೆ, ಅಂದಿಬೊಳಕ್, ಇರ್‌ಬೊಳಕ್, ನವಕ ಕಳಸ ಪೂಜೆ, ತುಲಭಾರ, ನೆರ್ಪು, ದೇವರ ಬಲದಲ್ಲಿ ವಿಶೇಷ ಪೂಜೆ, ವಸಂತ ಪೂಜೆ ಆಚರಣೆ ನಡೆಸಲಾಯಿತು. ಗ್ರಾಮದ ಭಕ್ತರು ಪಾಲ್ಗೊಂಡು ಪುನೀತರಾದರು.