ಯಾದಗಿರಿ: ಜಿ¯್ಲÁಡಳಿತ, ಜಿಪಂ ಸೇರಿ ಎಲ್ಲ ಇಲಾಖೆಗಳ ಹಿರಿಯ, ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಕೇಂದ್ರ ಸರ್ಕಾರದ ನೀತಿ ಆಯೋಗದ ಮಹಾತ್ವಾಕಾಂಕ್ಷಿ ಜಿ¯್ಲೆಯ ಕನಸು ನನಸು ಮಾಡೋಣ ಎಂದು ಜಿ¯್ಲÁಧಿಕಾರಿ ಹರ್ಷಲï ಭೋಯರ್ ಹೇಳಿದರು.
ಕೇಂದ್ರ ಸರ್ಕಾರದ ನೀತಿ ಆಯೋಗದ ಮಹಾತ್ವಾಕಾಂಕ್ಷಿ ಜಿ¯್ಲÉ ಯಾದಗಿರಿ ಮತ್ತು ಮಹಾತ್ವಾಕಾಂಕ್ಷಿ ಬ್ಲಾಕ್ ವಡಗೇರಾ ಯೋಜನೆಯಡಿ ಸಂಪೂರ್ಣ ಅಭಿಯಾನ ಸಮ್ಮಾನ ಸಮಾರೋಹ ಮತ್ತು ಆಕಾಂಕ್ಷಾ ಹಾಟ್ ಉದ್ಘಾಟನಾ ಕಾರ್ಯಕ್ರಮದ ಅಧ್ಯP್ಷÀತೆ ವಹಿಸಿ, ಸಾಧಕ ಅಧಿಕಾರಿ, ಸಿಬ್ಬಂದಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಅಭಿವೃದ್ಧಿಗಾಗಿ ಸರ್ಕಾರ ನೀಡಿದ ಸೂಚಂಕ್ಯಗಳಲ್ಲಿ ಮಹಾತ್ವಾಕಾಂಕ್ಷಿ ಜಿ¯್ಲÉ ಯಾದಗಿರಿ ತನ್ನ ನಿಗದಿತ ಗುರಿ ಆರಕ್ಕೆರಿದರೆ ವಡಗೇರಾ ಬ್ಲಾಕ್ ಆರಲ್ಲಿ ಐದು ಕೆಲಸಗಳನ್ನು ಮಾಡುವ ಮೂಲಕ ಹೆಚ್ಚಿನ ಸಾಧನೆ ಮಾಡಿದೆ ಎಂದರು. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದಿಸಿದ ಅವರು, ಮುಂದೆ ಕೂಡಾ ಇದೆ ರೀತಿ ಕೆಲಸ ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಪಂ ಸಿಇಒ ಲವೀಶ್ ಒರ್ಡಿಯಾ, ಈ ಸಾಧನೆಗೆ ಆಶಾ, ಅಂಗನವಾಡಿ ಕಾರ್ಯಕರ್ತರು, ಶಿP್ಷÀಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಪಟ್ಟ ಶ್ರಮಕ್ಕೆ ಫಲ ಲಭಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗದ ಆದೇಶದಂತೆ ಈ ಕಾರ್ಯಕ್ರಮ ಆಯೋಜಿಸಿ, ಗುರಿ ತಲುಪಲು ಶ್ರಮಿಸಿದ ತಳಮಟ್ಟದಿಂದ ಹಿರಿಯ ಅಧಿಕಾರಿಗಳನ್ನು ಗುರುತಿಸಿ ಇಂದು ಪ್ರಮಾಣಪತ್ರ ನೀಡುವ ಮೂಲಕ ಗೌರವಿಸಲಾಗಿದೆ ಎಂದರು.
ಇನ್ನೂ ಹೆಚ್ಚಿನ ರೀತಿಯಲ್ಲಿ ನಾವೆಲ್ಲರೂ ಕೆಲಸ ಮಾಡುವ ಮೂಲಕ ಕೇಂದ್ರ ಸರ್ಕಾರದ ಈ ಯೋಜನೆಯನ್ನು ಯಶಸ್ಸು ಮಾಡೋಣ ಎಂದರು. ಹೆಚ್ಚುವರಿ ಡಿಸಿ ರಮೇಶ ಕೋಲಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ¯್ಲÁ ಪೊಲೀಸ್ ವರಿಷ್ಠಾಧಿಕಾರಿ ಪ್ರಥ್ವಿಕ್ ಶಂಕರ್, ಸಿಪಿಒ ಕುಮಲಯ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿ¯್ಲÁ,ತಾಲೂಕು ಮಟ್ಟದ ಅಧಿಕಾರಿಗಳು, ಆಶಾ,ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರಿದ್ದರು. ಅಧಿಕಾರಿ ರಿಯಾಜ್ ಪಟೇಲï ನಿರೂಪಿಸಿದರು.