ಚಿತ್ರದುರ್ಗ: ಬಸವಣ್ಣ, ಬುದ್ಧ, ಡಾ.ಬಿ.ಆರ್.ಅಂಬೇಡ್ಕರ್ ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಮಹನೀಯರು. ಅದೇ ರೀತಿ ಸ್ವಾತಂತ್ರೃಕ್ಕಾಗಿ ಹಗಲಿರುಳು ಹೋರಾಡಿದ ಮಹಾತ್ಮಗಾಂಧಿ ಸರ್ವಕಾಲಕ್ಕೂ ಪ್ರಸ್ತುತ ಎಂದು ವಕೀಲ ಬಿ.ಕೆ.ರಹಮತ್ ಉಲ್ಲಾ ಹೇಳಿದರು.
ಮನೆಯಂಗಳದಲ್ಲಿ ಸಾಹಿತ್ಯ-ಸಂಸ್ಕೃತಿ ವೇದಿಕೆಯಿಂದ ವಿಘ್ನೇಶ್ವರ ಲೇಔಟ್‌ನ ಎಂ.ಹೊನ್ನೂರ್ ಸಾಹೇಬ್ ನಿವಾಸದಲ್ಲಿ ಗಾಂಧಿ ಜಯಂತಿ ಅಂಗವಾಗಿ ಸೋಮವಾರ ರಾತ್ರಿ ನಡೆದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಸತ್ಯ, ಅಹಿಂಸೆ, ತ್ಯಾಗದ ಪ್ರತೀಕವಾಗಿರುವ ಗಾಂಧಿ ಅವರ ತತ್ವಾದರ್ಶ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಡಾ.ಎಸ್.ಎನ್.ಹೇಮಂತರಾಜು ಮಾತನಾಡಿ, ಹೃದಯವಂತಿಕೆಯಿಂದ ಗಾಂಧಿ ವಿಶ್ವ ಗೆದ್ದರು. ಮನುಕುಲ ಮೇಲೆತ್ತಲು ಹೊರಟ ಹಠವಾದಿಯಾಗಿದ್ದರು. ದೇಶವನ್ನು ಒಗ್ಗೂಡಿಸುವ ತಾಕತ್ತು ಅವರನ್ನು ಬಿಟ್ಟರೆ, ಬೇರೆ ಯಾರಲ್ಲಿಯೂ ಇರಲಿಲ್ಲ ಎಂದು ಬಣ್ಣಿಸಿದರು.
ಎಂ.ಹೊನ್ನೂರ್ ಸಾಹೇಬ್, ವೇದಿಕೆ ಅಧ್ಯಕ್ಷೆ ಚಾಂದಿನಿ ಖಲೀದ್, ಉಪನ್ಯಾಸಕಿ ರೇಣುಕಾ ಪ್ರಕಾಶ್, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ದಯಾ ಪುತ್ತೂರ್ಕರ್, ಅಧ್ಯಕ್ಷ ಶಫೀ ಉಲ್ಲಾ ಇದ್ದರು.