ಜಿಲ್ಲೆ

ಮಹಾ ಚಂಡಿಕಾ ಹೋಮ ಸಂಪನ್ನ

ಬಾಲಮುರಳಿಕೃಷ್ಣ

ಅರಸೀಕೆರೆ ಗ್ರಾಮಾಂತರ: ಹಾರನಹಳ್ಳಿ ಅರಸೀಕೆರೆ ಕಸಬಾ ಹೋಬಳಿಯ ಈಡಿಗರಹಟ್ಟಿ ಗ್ರಾಮತೆ ಶ್ರೀ ದುರ್ಗಮ್ಮ ದೇವಿ ದೇವಾಲಯದಲ್ಲಿ ಇತ್ತೀಚೆಗೆ ಲೋಕಕಲ್ಯಾಣಾರ್ಥವಾಗಿ ಮಹಾ ಚಂಡಿಕಾ ಹೋಮ ನಡೆಯಿತು. ಶ್ರೀ ಅಂತರ ಘಟ್ಟಮ್ಮ ತಿಪಟೂರು ತಾಲೂಕು ಹುಚ್ಚನಹಳ್ಳಿ ಗ್ರಾಮದ ಶ್ರೀ ಚೌಡಮ್ಮ ಹುಲ್ಲೇಕೆರೆ ಅಮ್ಮ, ಕೆಂಚರಾಯಸ್ವಾಮಿ ದೇವರುಗಳ ಸಾನ್ನಿಧ್ಯದಲ್ಲಿ ಚಂಡಿಕಾ ಹೋಮನಡೆಯಿತು.

ಸಂಕಲ್ಪ ಗಣಪತಿ ಪೂಜೆ, ಪುಣ್ಯಾಹ, ದುರ್ಗಮ್ಮ ಸನ್ನಿಧಿಯಲ್ಲಿ ಅಮ್ಮನವರಿಗೆ ಅಭಿಷೇಕ, ಕಳಶ ಸ್ಥಾಪನೆ ಮಂಡಲ ರಚನೆ, ಅರ್ಚನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆದ ನಂತರ ಮಂಗಳ ದ್ರವ್ಯಗಳೊಂದಿಗೆ ಚಂಡಿಕಾ ಹೋಮ ನಡೆಯಿತು. ಸುಮಂಗಲಿ ಪೂಜೆ, ಆರತಿ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಿತು. ಹಾಸನದ ವೇದ ಬ್ರಹ್ಮ ಶ್ರೀ ಎಂ.ವಿ.ಕೃಷ್ಣಮೂರ್ತಿ ಘನಪಾಠಿಗಳ ಆಚಾರ್ಯತ್ವದಲ್ಲಿ ಚಂಡಿಕಾ ಹೋಮ ಕಾರ್ಯಕ್ರಮ ನಡೆಯಿತು. ಚಂಡಿಕಾ ಹೋಮದ ಸೇವೆಯನ್ನು ತಿಪಟೂರಿನ ಪುಟ್ಟಸ್ವಾಮಿ ಮಕ್ಕಳು ನೆರವೇರಿಸಿದರು. ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.