ಕಂಪ್ಲಿ: ನೇಕಾರ ಸಮುದಾಯದ ಮಹಿಳೆಯರು ರಾಜಕೀಯ ಪ್ರಾತಿನಿಧ್ಯ ಗಳಿಸುವಲ್ಲಿ ಮುಂದಾಗಬೇಕು ಎಂದು ತೊಗಟವೀರ ಕ್ಷತ್ರೀಯ ನೇಕಾರ ಮಹಿಳಾ ಸಂಘದ ಅಧ್ಯಕ್ಷೆ ಎಂ.ರಮಣಮ್ಮ ಹೇಳಿದರು.
ಇಲ್ಲಿನ ಸತ್ಯನಾರಾಯಣ ಪೇಟೆಯ ವೆಂಕಟರಮಣ ದೇವಸ್ಥಾನ ಬಳಿಯ ತೊಗಟವೀರ ಕ್ಷತ್ರೀಯ ನೇಕಾರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಶ್ರೀ ಚೌಡೇಶ್ವರಿ ಜಯಂತಿ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಮಹಿಳೆಯರು ಕೌಶಲ ತರಬೇತಿ ಪಡೆದು ಸ್ವ-ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸುವಲ್ಲಿ ಮುಂದಾಗಬೇಕು ಎಂದರು.
ಇದನ್ನೂ ಓದಿ:http://ಮಹಿಳೆಯರು ರಾಜಕೀಯ ಪ್ರಾತಿನಿಧ್ಯಗಳಿಸಲಿ
ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಪಿ.ಬ್ರಹ್ಮಯ್ಯ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರದೊಂದಿಗೆ ಕುಲಾಚಾರ ಪದ್ಧತಿಯನ್ನು ಕಲಿಸಬೇಕು ಎಂದು ತಿಳಿಸಿದರು.
ನೇಕಾರ ಮಹಿಳಾ ಸಂಘದ ಪದಾಧಿಕಾರಿಗಳಾದ ಜಿ.ಕೊಂಡಮ್ಮ, ಕಮಲಮ್ಮ, ಪಿ.ಸಂಪೂರ್ಣಮ್ಮ, ತೊಗಟವೀರ ಕ್ಷತ್ರೀಯ ನೇಕಾರ ಸಂಘದ ಅಧ್ಯಕ್ಷ ಎಂ.ವೆಂಕಟಕೊಂಡಯ್ಯ, ಪದಾಧಿಕಾರಿಗಳಾದ ಜಿ.ಸುಧಾಕರ, ಪಲ್ಲ ನಾಗರಾಜ, ವೆಂಕಟಪ್ಪ, ಜಿ.ವಿರೂಪಾಕ್ಷಪ್ಪ, ಜಿ.ಸುರೇಶ್, ಎಂ.ಈಶ್ವರ್, ಟಿ.ವೀರೇಶ್ ಇತರರಿದ್ದರು.