ಚಿತ್ರದುರ್ಗ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಗುರುವಾರ ಅಲಂಕೃತ ಸಾರೋಟಿನಲ್ಲಿ ವಾಲ್ಮೀಕಿ ಅವರ ಪುತ್ಥಳಿ ಸೇರಿ ಭಾವಚಿತ್ರ ಕೂರಿಸಿ, ನಂತರ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.
ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಗುರುವಾರ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಶ್ರೀ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಡಾ.ರಾಜೇಶ್, ಸತ್ಯನಾರಾಯಣ್ ಸೇರಿ ವೈದ್ಯರು, ಶುಶ್ರೂಷಕರು ಇದ್ದರು.
ಭಾರತೀಯ ಯೋಗ: ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಪ್ರಗತಿ ವಿದ್ಯಾಮಂದಿರ ಯೋಗ ಶಾಖೆಯಲ್ಲಿ ಗುರುವಾರ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ರವಿ ಕೆ.ಅಂಬೇಕರ್, ನಿರ್ದೇಶಕ ಮಲ್ಲಿಕಾರ್ಜುನಾಚಾರ್, ಮಹೇಶ್, ಜಗಜ್ಯೋತಿ ಯೋಗ ಶಿಕ್ಷಕರಾದ ವಸಂತಲಕ್ಷ್ಮೀ, ಮಂಜುಳಾ, ಯೋಗ ಸಾಧಕರಾದ ಪಲ್ಲವಿ, ರಚನಾ, ಲೀಲಾವತಿ, ಶಾಂತಮ್ಮ ಇತರರಿದ್ದರು.
ಎಸ್‌ಜೆಎಂ ಕಾಲೇಜು: ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಡಾ.ಎಲ್.ಈಶ್ವರಪ್ಪ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಚಂದ್ರವಳ್ಳಿ ಕಾಲೇಜು: ಚಂದ್ರವಳ್ಳಿ ಎಸ್‌ಜೆಎಂ ಪದವಿ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಡಾ.ಎಸ್.ಎಚ್.ಪಂಚಾಕ್ಷರಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಡಯಟ್: ಡಯಟ್‌ನಲ್ಲಿ ಗುರುವಾರ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಎಂ.ನಾಸಿರುದ್ದೀನ್, ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ, ಹಿರಿಯ ಉಪನ್ಯಾಸಕರಾದ ಎಸ್.ಸಿ.ಪ್ರಸಾದ್, ಎಸ್.ಜ್ಞಾನೇಶ್ವರ, ತಿಪ್ಪೇಸ್ವಾಮಿ, ಎಚ್.ಗಿರಿಜಾ, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ನಿತ್ಯಾನಂದ, ಸಿದ್ದೇಶಿ, ಲೀಲಾವತಿ, ಶಿವಲೀಲಾ, ಪದ್ಮಾ, ಅರ್ಜುಮಂದ್ ಬಾನು, ರಂಗಸ್ವಾಮಿ, ತಾಂತ್ರಿಕ ಸಹಾಯಕ ಅವಿನಾಶ್, ಅಧೀಕ್ಷಕಿ ಗೀತಾ ಇತರರಿದ್ದರು.