ಜಿಲ್ಲೆ

ಮಹರ್ಷಿ ವಾಲ್ಮೀಕಿ ದಿನಾಚರಣೆ ಪ್ರಯುಕ್ತ ಮಜ್ಜಿಗೆ ವಿತರಣೆ

ಚಾಮರಾಜನಗರ: ನಗರದ ಹಿಂದು ಜಾಗೃತಿ ಸಮಿತಿ ವತಿಯಿಂದ ನಗರಸಭಾ ಕಚೇರಿ ಬಳಿ ಮಹರ್ಷಿ ವಾಲ್ಮೀಕಿ ದಿನಾಚರಣೆ ಅಚರಿಸಿ ಮೆರವಣಿಗೆಯಲ್ಲಿ ಬಂದ ಸಾವಿರಕ್ಕೂ ಹೆಚ್ಚು ಜನಕ್ಕೆ ಮಜ್ಜಿಗೆ ವಿತರಿಸಲಾಯಿತು.

ನಗರಸಭಾ ಕಚೇರಿ ಬಳಿ ವಾಲ್ಮೀಕಿ ಭಾವಚಿತ್ರ ಇಟ್ಟು ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದ ನಂತರ ಜಿಲ್ಲಾಡಳಿತ ವತಿಯಿಂದ ಮಹರ್ಷಿ ವಾಲ್ಮೀಕಿ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಮೆರವಣಿಗೆಯಲ್ಲಿ ಬಂದ ಸಾವಿರಕ್ಕೂ ಹೆಚ್ಚು ಜನರಿಗೆ ಮಜ್ಜಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹಿಂದು ಜಾಗೃತಿ ಸಮಿತಿಯ ಶ್ರೀಕಂಠಸ್ವಾಮಿ (ಕಂಠಿ) ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ರಾಮಾಯಣದಂತಹ ಮಹಾನ್ ಗ್ರಂಥವನ್ನು ರಚಿಸಿದ ಮಹಾನ್ ಋಷಿ ಎಂದರು. ಈ ಸಂದರ್ಭದಲ್ಲಿ ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಭೇಂದ್ರಪ್ಪ, ಮುಖಂಡ ನಟರಾಜು, ಕೃಷ್ಣಕುಮಾರ್, ಮಹೇಶ್, ಬಾಲಸುಬ್ರಹ್ಮಣ್ಯಂ, ಸುರೇಶ್‌ನಾಯ್ಕ, ವಿರಾಟ್ ಶಿವು, ಬುಲೆಟ್ ಚಂದ್ರು, ಸುಂದರಪ್ಪ ಇತರರು ಇದ್ದರು.