ಬಳ್ಳಾರಿ : ಮಹರ್ಷಿ ಶ್ರೀವಾಲ್ಮೀಕಿ ಅವರು ರಾಮಾಯಣ ಕೃತಿಯ ಮೂಲಕ ಎಂದೆಂದಿಗೂ ಪ್ರಸ್ತುತ ರಾಗಿದ್ದಾರೆ ಎಂದು ವಿಎಸ್‌ಕೆ ವಿವಿ ಕುಲಸಚಿವ ಎಸ್. ಎನ್. ರುದ್ರೇಶ್ ಅಭಿಪ್ರಾಯಪಟ್ಟರು.
ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಮಾಯಣ ಕೃತಿಯು 300ಕ್ಕೂ ಹೆಚ್ಚು ಉಪ ರಾಮಾಯಣಗಳನ್ನು ಸೃಷ್ಟಿಸುವಲ್ಲಿ ಪ್ರೇರಣೆಯ ಕೃತಿಯಾಗಿದೆ. ವಿವಿಯಲ್ಲಿ ತಳಮಟ್ಟದ ಶ್ರಮಿಕರನ್ನು ಗೌರವಿಸುವ ಮೂಲಕ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಸೌಕರ್ಯಗಳನ್ನು ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಇಂತಹ ಆಚರಣೆಗಳು ಅರ್ಥಪೂರ್ಣವಾಗುತ್ತಿರುವುದು ಶಿಕ್ಷಣ ವ್ಯವಸ್ಥೆಗೆ ವಿಶ್ವವಿದ್ಯಾಲಯವು ಸಲ್ಲಿಸುತ್ತಿರುವ ಗೌರವವಾಗಿದೆ ಎಂದರು.
ಸಿಂಡಿಕೇಟ್ ಸದಸ್ಯೆ ಜಯಲಕ್ಷ್ಮಿ ನಾಯಕ್, ಕುಲಸಚಿವ ಪ್ರೊ. ರಮೇಶ ಓಲೆಕಾರ್, ಪ್ರೊ. ಡಾ. ಎಚ್. ತಿಪ್ಪೇಸ್ವಾಮಿ,
ಪ್ರೊ. ರಾಬರ್ಟ್ ಜೋಸ್ ಮಾತನಾಡಿದರು.