ಜಿಲ್ಲೆ

ಮಹದೇಶ್ವರ ಜ್ಯೋತಿ ಯಾತ್ರೆಗೆ ಸ್ವಾಗತ

ಪಾಂಡವಪುರ: ಮಹಾಕುಂಭಮೇಳದ ಅಂಗವಾಗಿ ಮಹದೇಶ್ವರ ಬೆಟ್ಟದಿಂದ ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಚ್.ಮಲ್ಲಿಗೆರೆಗೆ ಆಗಮಿಸಿದ ಮಹದೇಶ್ವರ ಜ್ಯೋತಿ ಯಾತ್ರೆಯನ್ನು ಬಿಜೆಪಿ ಮುಖಂಡ ಡಾ.ಇಂದ್ರೇಶ್ ನೇತೃತ್ವದಲ್ಲಿ ಭಕ್ತರು ಅದ್ದೂರಿಯಾಗಿ ಸ್ವಾಗತಿಸಿದರು.

ಮಹದೇಶ್ವರ ಜ್ಯೋತಿಯ ಒಂದು ರಥ ಎಚ್.ಮಲ್ಲಿಗೆರೆ, ದುದ್ದ, ಶಿವಳ್ಳಿ, ಗೊರವಾಲೆ, ಹೊಳಲು ಹಾಗೂ ಚಂದಗಾಲು ಮೂಲಕ ಶ್ರೀರಂಗಪಟ್ಟಣ ಪ್ರವೇಶಿಸಿತು. ಮಂಡ್ಯ ಮಾರ್ಗವಾಗಿ ಆಗಮಿಸಿದ ಮತ್ತೊಂದು ಜ್ಯೋತಿ ತಾಲೂಕಿನ ಪಿಎಸ್‌ಎಸ್‌ಕೆ ಬಳಿಯಿಂದ ಆರತಿ ಉಕ್ಕಡ, ಕ್ಯಾತನಹಳ್ಳಿ, ಹರವು, ಅರಳಕುಪ್ಪೆ, ಕಟ್ಟೇರಿ, ಹಾಗನಹಳ್ಳಿ, ಚಿನಕುರಳಿ, ಕೆ.ಬೆಟ್ಟಹಳ್ಳಿ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಾಳ್ಳೆ, ಜಕ್ಕನಹಳ್ಳಿ ಮಾರ್ಗವಾಗಿ ಮೇಲುಕೋಟೆ ತಲುಪಿತು.ಕ್ಷೇತ್ರಾಧ್ಯಕ್ಷ ಎಲ್.ಅಶೋಕ್, ದುದ್ದ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜು, ಹೊಳಲು ಕೃಷ್ಣ, ರಾಜೀವ್ ತಮ್ಮಣ್ಣ, ಬಳಘಟ್ಟ ಅಶೋಕ್, ದುರ್ಗೇಶ್ ಇತರರು ಇದ್ದರು.