ಬಾಗಲಕೋಟೆ: ಹಳೇ ಬಾಗಲಕೋಟೆ ನಗರ ವ್ಯಾಪ್ತಿ ವಾರ್ಡ್ ನಂಬರ್ ೧ ಕಾಂಟ್ಯಾçಕ್ಟರ್ ಬಡಾವಣೆಯಲ್ಲಿ ಪ್ರಾರ್ಥನಾ ಮಂದಿರ ನಿರ್ಮಿಸುವ ಕುರಿತು ಪ್ರಸ್ತಾವನೆಗೆ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೇ ತೀವ್ರ ವಾಕ್ಸಮರ ನಡೆಯಿತು.
ಇಲ್ಲಿನ ನಗರಸಭೆ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಸೀದಿ ನಿರ್ಮಾಣಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ದರು. ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮಸೀದಿ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ವಾರ್ಡ್ ನಂಬರ್ ೧ ಬಿಜೆಪಿ ಸದಸ್ಯೆ ಶೀವಲಿಲಾ ಪಟ್ಟಣಶೆಟ್ಟಿ ಮಾತನಾಡಿ, ಕಾಂಟ್ಯಾçಕ್ಟರ್ ಕಾಲೋನಿಯಲ್ಲಿ ಮಸೀದಿ ನಿರ್ಮಾಣದಿಂದ ಸಮಸ್ಯೆ ಉಂಟಾಗಲಿದೆ. ಅಕ್ಕ ಪಕ್ಕ ಶಾಲಾ, ಕಾಲೇಜು, ಆಸ್ಪತ್ರೆಗಳು ಇವೆ. ದಿನಕ್ಕೆ ೫ ರಿಂದ ೬ ಸಾರಿ ನಮಾಜ್ ಮಾಡುವದರಿಂದ ಕಿರಿ ಕಿರಿ ಉಂಟಾಗಲಿದೆ. ಅಲ್ಲಿ ಒಂದೇ ಸಮಾಜದ ಜನ ಇಲ್ಲ. ಬೇರೆ ಬೇರೆ ಸಮಾಜದವರು ಇದ್ದಾರೆ. ಅವರೂ ಈಗಾಗಲೇ ಆಯುಕ್ತರಿಗೆ ಆಕ್ಷೇಪನೆ ಸಲ್ಲಿಸಿದ್ದಾರೆ. ಈ ವಿಷಯದಲ್ಲಿ ಬಿಜೆಪಿ ಎಲ್ಲ ಸದಸ್ಯರ ವಿರೋಧವಿದೆ ಎಂದು ತಿಳಿಸಿದರು.
ಈ ವೇಳೆ ನಗರಸಭೆ ಮಾಜಿ ಉಪಾಧ್ಯಕ್ಷ, ಸದಸ್ಯ ಬಸವರಾಜ ಅವರಾದಿ ಮಾತನಾಡಿ, ೨೦೨೧ ರಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಛತ್ರಪತಿ ಶಿವಾಜಿ ಮಹಾರಾಜ ಪುತ್ಥಳಿ, ಅಣ್ಣ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಠರಾವು ಮಾಡಲಾಗಿತ್ತು. ಎಲ್ಲ ಇಲಾಖೆಗಳ ಪರವಾಣಿಗೆ ಕೂಡಾ ಸಿಕ್ಕಿತ್ತು, ಆದರು ಸಹ ಪುತ್ಥಳಿ ಸ್ಥಾಪನೆಗೆ ಜಿಲ್ಲಾಽಕಾರಿಗಳು ಅನುಮತಿ ನೀಡಲಿಲ್ಲ. ಇದೀಗ ಮಸೀದಿ ನಿರ್ಮಾಣಕ್ಕೆ ಹೇಗೆ ಅವಕಾಶ ನೀಡುತ್ತೀರಿ? ಇದು ಸರಿಯಾದ ನಿಲುವು, ನ್ಯಾಯವಲ್ಲ ಎಂದು ಪ್ರಶ್ನೆಗಳ ಸುರಿ ಮಳೆಗೈದರು.
ಇನ್ನೋರ್ವ ಸದಸ್ಯ ಶ್ರೀನಾಥ ಸಜ್ಜನ ಧ್ವನಿಗೂಡಿಸಿ ಮಸೀದಿಗೆ ಅನುಮತಿ ನೀಡಲು ತರಾತುರಿ ಮಾಡುವ ಇವರು, ಶಿವಾಜಿ, ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಯಾಕೆ ಮಾಡುವದಿಲ್ಲ. ಇದೀಗ ಇಲ್ಲದ ಕಾರಣ ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೆ ಅನುಮತಿ ನೀಡಬಾರದು. ಬಿಜೆಪಿ ಸದಸ್ಯರ ವಿರೋಧವಿದೆ ಎಂದು ಹೇಳಿದರು.
ಮಧ್ಯ ಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯರಾದ ಹಾಜಿಸಾಬ ದಂಡಿನ, ಖಾಜಿಸಾಬ ಹೊನ್ಯಾಳ, ಚನ್ನವೀರ ಅಂಗÀಡಿ, ನಾವು ಶಿವಾಜಿ, ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ವಿರೋಧ ಮಾಡಲಿಲ್ಲ. ಸಾಮಾನ್ಯ ಸಭೆಂiÀಲ್ಲಿ ಸರ್ವಾನುಮತ ದಿಂದ ಒಪ್ಪಿಗೆ ನೀಡಿದ್ದೇವೆ. ಇದೀಗ ವಿರೋಧ ಮಾಡುವುದು ತರವಲ್ಲ. ಹಿಂದಿನ ಶಾಸಕರು ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲಿಲ್ಲ. ಪರಿಣಾಮ ಪುತ್ಥಳಿ ಸ್ಥಾಪನೆಗೆ ಹಿನ್ನಡೆಯಾಗಿದೆ. ಅದಕ್ಕೂ ಇದಕ್ಕೂ ಸಂಬAಧ ಕಲ್ಪಿಸುವುದು ಸರಿಯಲ್ಲ. ಅಲ್ಲಿ ಅಲ್ಪಸಂಖ್ಯಾತರಿಗೆ ಪ್ರಾರ್ಥನೆ ಸಲ್ಲಿಸಲು ಯಾವುದೇ ಮಸೀದಿಗಳು ಇಲ್ಲ. ಅನ್ಯ ಸಮಾಜದವರು ಇಲ್ಲ. ಒಂದೇ ಸಮಾಜದವರು ಇದ್ದಾರೆ. ಇದಕ್ಕೆ ವಿರೋಧ ಮಾಡಬಾರದು. ಧರ್ಮ, ಜಾತಿ ಎಳೆತಂದು ಸಮಾಜದ ಸಾಮರಸ್ಯ ಹದಗೆಡಿಸಬಾರದು ಎಂದು ಆಗ್ರಹಿಸಿದರು.
ಇದೇ ವಿಷಯದ ಮೇಲೆ ನಗರಸಭೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೇ ತೀವ್ರ ಮಾತಿನ ಚಕಮಕಿ ನಡೆಯಿತು. ಈ ವೇಳೆ ತುಟಿಕ್, ಪಿಟಿಕ್ ಎನ್ನದ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಉಪಾಧ್ಯಕ್ಷೆ ಶೋಭಾರಾವ ದಿವ್ಯ ಮೌನ ಆಡಳಿತರೂಢ ಸದಸ್ಯರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿತು.
ಕೊನೆಗೆ ಆಯುಕ್ತ ಆರ್.ವಾಸಣ್ಣ ಮಾತನಾಡಿ, ನಗರಸಭೆ ಕೌನ್ಸಿಲ್ ಒಪ್ಪಿಗೆ ನೀಡಿದರೇ ಮಾತ್ರ ನಾವು ಪರವಾಣಿಗೆ ನೀಡುತ್ತೇವೆ. ಆದರೇ ಇದಕ್ಕೆ ನಾವು ಸಲಹೆ, ಸೂಚನೆ ನೀಡಲು ಸಾಧ್ಯವಿಲ್ಲ. ಕೌನ್ಸಿಲ್ ನಿರ್ಣಯವೇ ಅಂತಿಮ ಎಂದು ಸ್ಪಷ್ಟಪಡಿಸಿ ಸದಸ್ಯರ ಜಟಾಪಟಿಗೆ ತೆರೆ ಎಳೆದರು.
ಸಭೆಯಲ್ಲಿ ಸಭಾಪತಿ ಯಲ್ಲಪ್ಪ ನಾರಾಯಣಿ, ಸದಸ್ಯರಾದ ವಿ.ವಿ.ಶಿರಗಣ್ಣವರ, ನಾಗರತ್ನಾ ಹೆಬ್ಬಳ್ಳಿ, ಸ್ಮೀತಾ ಪವಾರ, ಶಶಿಕಲಾ ಮಜ್ಜಗಿ, ಅಂಬಾಜಿ ಜೋಶಿ, ಲಕ್ಷ÷್ಮಣ ಮುಚಖಂಡಿ, ಚನ್ನಯ್ಯ ಹಿರೇಮಠ, ಭುವನೇಶ್ವರಿ ಕುಪ್ಪಸ್ತ, ಶಿವಬಸಪ್ಪ ಬಳ್ಳಾರಿ, ಶಾಂತಾ ಹನಮಕ್ಕನವರ, ರತ್ನಾ ಕೆರೂರ, ಲಕ್ಷಿ÷್ಮÃ ಚವ್ದಾಣ, ಸಾಗರ ಬಂಡಿ, ಸೀಮಾ ಕೌಸರ್ ನದಾಫ, ದ್ಯಾಮವ್ವ ಸೂಳಿಭಾವಿ, ರಮೇಶ ಕೋಟಿ ಇದ್ದರು.