ವಾಡಿ: ಐದು ವರ್ಷದಿಂದ ಕಾಲಿನ ಸ್ವಾಧೀನ ಕಳೆದುಕೊಂಡ ಇಬ್ಬರು ಸಹೋದರಿಯರು ಲಾಕ್ಡೌನ್ನಿಂದಾಗಿ ಆಯುವರ್ೇದಿಕ್ ಮಾತ್ರೆ ತರಲು ಕೇರಳ, ಬೆಂಗಳೂರಿಗೆ ಹೋಗಲಾಗದೆ ಅತೀವ ನೋವಿನಿಂದ ಕಣ್ಣೀರಿಡುತ್ತಿದ್ದು, ಸರ್ಕಾರದ ಸಹಾಯಕ್ಕೆ ಅಂಗಲಾಚುತ್ತಿದ್ದಾರೆ.
ಪಟ್ಟಣದ ಎಸಿಸಿ ಕಾಲನಿ ನಿವಾಸಿ ಮಹಾದೇವ-ಪ್ರೇಮಾ ಹೀರಾಪುರ ದಂಪತಿ ಪುತ್ರಿಯರಾದ ಸರಿತಾ(28), ಮಹಾದೇವಿ(24) ಐದು ವರ್ಷದ ಹಿಂದೆ ಮಸಲ್ಸ್ ಡಿಸ್ಪೋಬಿಯಾ ಎಂಬ ರೋಗಕ್ಕೆ ತುತ್ತಾಗಿದ್ದು, ಪಾಲಕರು ಕೇರಳದ ಕೋರಿಯಸ್ ಆಯುವೇದಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಪ್ರತಿ ತಿಂಗಳು ಕೇರಳಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದು, ಅಗತ್ಯಕ್ಕೆ ಅನುಗುಣ ಬೆಂಗಳೂರು ಜೆಪಿ ನಗರದಲ್ಲಿ ಮಾತ್ರೆಗಳನ್ನು ಖರೀದಿಸುತ್ತಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಾತ್ರೆ ತರಲಾಗದೆ, ಕೇರಳಕ್ಕೆ ಹೋಗಿ ಚಿಕಿತ್ಸೆ ಪಡೆಯುವುದಕ್ಕೂ ಆಗದೆ ಪರಿತಪಿಸುತ್ತಿದ್ದಾರೆ. ಮಾತ್ರೆ ಇಲ್ಲದೆ ದಿನೇದಿನೆ ಹೆಚ್ಚುತ್ತಿರುವ ನೋವಿನಿಂದ ನರಳುವಂತಾಗಿದೆ.
ಹಿರಿಯ ಮಗಳಾದ ಸರಿತಾ ಐದು ವರ್ಷ, ಕಿರಿಯವಳಾದ ಮಹಾದೇವಿ ಮೂರು ವರ್ಷದಿಂದ ಕಾಲಿನ ಸ್ವಾಧೀನ ಕಳೆದುಕೊಂಡಿದ್ದು, ಬೆಂಗಳೂರಿನಿಂದ ಮಾತ್ರೆಗಳನ್ನು ತಂದು ಕೊಡಲು ಪಾಲಕರು ಅಂಗಲಾಚುತ್ತಿದ್ದಾರೆ. ಈ ಬಗ್ಗೆ ಕುಟುಂಬಸ್ಥರು ಶಾಸಕ ಪ್ರಿಯಾಂಕ್ ಖಗರ್ೆ ಹಾಗೂ ಜಿಲ್ಲಾ ವೈದ್ಯಾಧಿಕಾರಿ ಗಮನಕ್ಕೆ ತಂದಿದ್ದಾರೆ. ಆದರೆ ಈವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಮಾತ್ರೆಗಳನ್ನಾದರೂ ತಂದುಕೊಡಿ
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ , ಜಿಲ್ಲಾಧಿಕಾರಿ ಶರತ್ ಬಿ. ಮಕ್ಕಳ ನೋವಿಗೆ ಸ್ಪಂದಿಸಿ ಚಿಕಿತ್ಸೆಗಾಗಿ ಕೇರಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಕನಿಷ್ಠಪಕ್ಷ ಬೆಂಗಳೂರಿನಿಂದ ಮಾತ್ರೆಗಳನ್ನು ತರಿಸಿಕೊಡುವ ಪ್ರಯತ್ನವಾದರೂ ಮಾಡಬೇಕು. ಮಹಾದೇವ ಹೀರಾಪುರ (95387 70289) ಅವರನ್ನು ಸಂಪಕರ್ಿಸಬಹುದು.