ಜಿಲ್ಲೆ

ಮಳೆಹಾನಿ ನಿರಾಶ್ರಿತರಿಗೆ ಸಚಿವರಿಂದ ಚೆಕ್ ವಿತರಣೆ

ದಾವಣಗೆರೆ: ಕಳೆದ ವಾರ ಸುರಿದ ಮಳೆಯಿಂದಾಗಿ ದಾವಣಗೆರೆ ತಾಲೂಕಿನ 20 ಕಡೆಗಳಲ್ಲಿ ಹಾನಿಯಾಗಿದ್ದು, ನಿರಾಶ್ರಿತ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಹಾಯಧನದ ಚೆಕ್ ವಿತರಿಸಿದರು.

ಸೋಮವಾರ ತಮ್ಮ ಗೃಹ ಕಚೇರಿಯಲ್ಲಿ ಚೆಕ್ ವಿತರಿಸಿದ ಸಚಿವರು ನಿರಾಶ್ರಿತರಿಗೆ ಧೈರ್ಯ ತುಂಬಿದರು. ಮುಂದಿನ ದಿನಗಳಲ್ಲಿ ಏನೇ ತೊಂದರೆ ಆದರೂ ನಮ್ಮ ಗಮನಕ್ಕೆ ತರುವಂತೆ ತಿಳಿಸಿದರು. ಅತಿವೃಷ್ಟಿ, ಅನಾವೃಷ್ಟಿಯೇ ಇರಲಿ ಹಾನಿಗೊಳಗಾದ ಸಂತ್ರಸ್ತರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಪರಿಹಾರ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ಪರಶುರಾಮ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಕರಿಬಸಪ್ಪ, ಮುಖಂಡರಾದ ಕಕ್ಕರಗೊಳ್ಳ ಗಿರೀಶ್, ಬೂದಾಳ್ ಬಾಬು, ತಹಸೀಲ್ದಾರ್ ಎಂ.ಬಿ.ಅಶ್ವಥ್ ಇತರರಿದ್ದರು. ---