ಚಿತ್ರದುರ್ಗ: ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಬಾಳೆ, ಪಪ್ಪಾಯ, ಈರುಳ್ಳಿ, ಟೊಮ್ಯಾಟೋ, ಬೀನ್ಸ್ ಸೇರಿ ಹಣ್ಣು-ತರಕಾರಿ ಬೆಳೆಗಳಿಗೆ ಹಾನಿ ಉಂಟಾಗಿದೆ.
ಎಷ್ಟು ಹೆಕ್ಟೇರ್ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬ ಕುರಿತು ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಸರ್ವೇ ಆರಂಭಿಸಿದೆ. ಹಿರಿಯೂರು ತಾಲೂಕಿನಲ್ಲಿ 8 ಹೆಕ್ಟೇರ್ ಕೃಷಿ ಬೆಳೆಗಳಿಗೆ ಹಾನಿಯಾಗಿದೆ.
ಮಂಗಳವಾರ ಅಲ್ಲದೆ, ಸೋಮವಾರ ರಾತ್ರಿ ಕೂಡ ಸೇರಿ ಸುರಿದ ಮಳೆಯಿಂದಾಗಿ ಹೊಳಲ್ಕೆರೆ ತಾಲೂಕಿನಲ್ಲಿ ಒಟ್ಟು 5 ಮನೆಗಳು ಸಂಪೂರ್ಣ, ಜಿಲ್ಲೆಯ 27 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ.
ಚಿತ್ರದುರ್ಗ-ಚಳ್ಳಕೆರೆ-ಹೊಳಲ್ಕೆರೆ ತಾಲೂಕಿನಲ್ಲಿ ತಲಾ 8 ಮನೆ ಭಾಗಶಃ, ಹಿರಿಯೂರು 3, ಹೊಸದುರ್ಗ 2, ಮೊಳಕಾಲ್ಮೂರು ತಾಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿರುವ ಕುರಿತು ವರದಿಯಾಗಿದೆ.
5ರಂದು ಸುರಿದ ವಿವರದನ್ವಯ ಜಿಲ್ಲೆಯಲ್ಲಿ ಸರಾಸರಿ 31 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ 17 ಮಿ.ಮೀ, ಚಿತ್ರದುರ್ಗ 16.5, ಹಿರಿಯೂರು 36.4, ಹೊಳಲ್ಕೆರೆ 44.6, ಹೊಸದುರ್ಗ 51.5, ಮೊಳಕಾಲ್ಮೂರು ತಾಲೂಕಿನಲ್ಲಿ 21.1 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ವಿವರ: ಚಳ್ಳಕೆರೆ 20.6 ಮಿ.ಮೀ, ನಾಯಕನಹಟ್ಟಿ 20.9, ಪರಶುರಾಂಪುರ 18.2, ತಳಕು 9.6, ಚಿತ್ರದುರ್ಗ 24.3, ಭರಮಸಾಗರ 6.8, ಹಿರೇಗುಂಟನೂರು 8.4, ತುರುವನೂರು 19.4, ಹಿರಿಯೂರು 71.8, ಐಮಂಗಲ 48.8, ಧರ್ಮಪುರ 13.6, ಜವನಗೊಂಡನಹಳ್ಳಿ 20.5, ಹೊಳಲ್ಕೆರೆ 42.2, ಬಿ. ದುರ್ಗ 41.5, ರಾಮಗಿರಿ 51.3, ತಾಳ್ಯ 43.3 ಮಿ.ಮೀ ಮಳೆಯಾಗಿದೆ.
ಹೊಸದುರ್ಗ 49.7 ಮಿ.ಮೀ, ಮಾಡದಕೆರೆ 73.1, ಮತ್ತೋಡು 51.7, ಶ್ರೀರಾಂಪುರ 25.5, ಮೊಳಕಾಲ್ಮೂರು 16.6, ದೇವಸಮುದ್ರದಲ್ಲಿ 26.1 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮಾಹಿತಿ ನೀಡಿದೆ.