ತ್ಯಾಗರ್ತಿಯಲ್ಲಿ ನಿರಂತರ ಮಳೆಯಿಂದ ನೀರು ಹರಿದು ಭತ್ತದ ಗದ್ದೆ, ತೋಟಗಳಿಗೆ ಹಾನಿಯಾಗಿರುವುದು. ಸೋಮಶೇಖರ್ ಲಾವಿಗ್ಗೆರೆ, ಬರೂರು ಗ್ರಾಪಂ ಸದಸ್ಯ ಶಿವಮೂರ್ತಿ, ಗಿರೀಶ್ ಕೋವಿ ಇತರರಿದ್ದರು. 
ಜಿಲ್ಲೆ

ಮಳೆಯಿಂದ ಭತ್ತದ ಬೆಳೆ ಹಾನಿ

ಟಿ.ಎಚ್.ಸಂತೋಷ್ ಕುಮಾರ್

ತ್ಯಾಗರ್ತಿ: ಕಳೆದ ಮೂರ‌್ನಾಲ್ಕು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹೊಲಗದ್ದೆಗಳಲ್ಲಿ ನೀರು ತುಂಬಿ ರೈತರಿಗೆ ನಷ್ಟ ಸಂಭವಿಸಿದೆ. ಬಸವನಬ್ಯಾಣ, ಗುತ್ತನಹಳ್ಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆ ನೀರು ನುಗ್ಗಿರುವ ಕಾರಣ ಭತ್ತ, ಮೆಕ್ಕೆಜೋಳ, ಶುಂಠಿ, ಅಡಕೆ ತೋಟಗಳಿಗೆ ಹಾನಿಯಾಗಿದೆ. ತಾಪಂ ಮಾಜಿ ಸದಸ್ಯ ಸೋಮಶೇಖರ ಲಾವಿಗ್ಗೆರೆ ಶುಕ್ರವಾರ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಕಾರಿಗಳಿಗೆ ಮಾಹಿತಿ ನೀಡಿದರು.