ತಾರನಬೈಲು ರಸ್ತೆಯಲ್ಲಿ ಕುಸಿತವಾಗಿರುವ ಸ್ಥಳವನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಪರಿಶೀಲಿಸಿದರು. ರಾಘವೇಂದ್ರ, ಅನ್ನಪೂರ್ಣಾ, ರವಿ ಸುಮಾ, ಮಹಾಲಕ್ಷ್ಮೀ, ಗಣಪತಿ ಇತರರಿದ್ದರು. 
ಜಿಲ್ಲೆ

ಮಳೆಯಿಂದ ತಾರನಬೈಲು ರಸ್ತೆ ಕುಸಿತ

ಹೊಸನಗರ: ತಾಲೂಕಿನ ಪುರಪ್ಪೆಮನೆಯಿಂದ ಸಾಗರ ತಾಲೂಕಿನ ಬಿಲಗೋಡಿ ಸಂಪರ್ಕಿಸುವ ತಾರನಬೈಲು ರಸ್ತೆ ಮಳೆಯಿಂದ ಕುಸಿದಿದ್ದು, ಸ್ಥಳಕ್ಕೆ ಮಾಜಿ ಸಚಿವ ಹರತಾಳು ಹಾಲಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ಈ ಬಾರಿ ಮಳೆಗೆ ಕಾಂಕ್ರೀಟ್ ರಸ್ತೆಯ ಕೆಳಗಿನ ಮಣ್ಣು ಭಾರಿ ಪ್ರಮಾಣದಲ್ಲಿ ಕುಸಿದು ಸಂಪರ್ಕ ಕಡಿತ ಭೀತಿ ಎದುರಾಗಿದೆ. ಆದರೂ ಅಕಾರಿಗಳು ಈವರೆಗೆ ಭೇಟಿ ನೀಡಿಲ್ಲ. ಸರ್ಕಾರಕ್ಕೂ ಅತಿವೃಷ್ಟಿ ಅನಾಹುತಕ್ಕೆ ಸ್ಪಂದಿಸುವ ಕಾಳಜಿ ಇದ್ದಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳೆಯಿಂದ ಇಷ್ಟೆಲ್ಲ ಅನಾಹುತ ನಡೆದಿದ್ದರೂ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಜನಪ್ರತಿನಿಗಳು ಕೂಡ ಗಣಪತಿ ಹಬ್ಬದಲ್ಲಿ ಹಾಡು ಹೇಳ್ಕೊಂಡು ಡಾನ್ಸ್ ಮಾಡೋದಕ್ಕೆ ಸೀಮಿತವಾಗಿದ್ದಾರೆ. ತಾರನಬೈಲು ರಸ್ತೆ ಕುಸಿತ ಭಯಾನಕವಾಗಿದೆ. ಆದರೂ ಈ ಬಗ್ಗೆ ಯಾರೂ ಗಮನಹರಿಸಿಲ್ಲ ಎಂದು ಆರೋಪಿಸಿದರು.

ಮಳೆಹಾನಿಗೆ ಸಂಬಂಸಿ ಜಿಲ್ಲಾಕಾರಿಗಳು ತ್ವರಿತವಾಗಿ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ನಡೆದ ಸಂದರ್ಭ ಸ್ಥಳೀಯ ವಿಎ, ಆರ್‌ಐ, ತಹಸೀಲ್ದಾರ್ ಮತ್ತು ಸಂಬಂಸಿದ ಅಕಾರಿಗಳು ತುರ್ತಾಗಿ ಪರಿಶೀಲಿಸಬೇಕು. ಆದರೆ ಎಲ್ಲದಕ್ಕೂ ಅಸಡ್ಡೆ ಮಾಡುತ್ತಿದ್ದಾರೆ. ಈ ಸಂಬಂಧ ಜಿಲ್ಲಾಕಾರಿಯನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದರು.

ಗ್ರಾಪಂ ಉಪಾಧ್ಯಕ್ಷ ರಾಘವೇಂದ್ರ, ಪ್ರಮುಖರಾದ ಅನ್ನಪೂರ್ಣಾ, ರವಿ ಸುಮಾ, ಮಹಾಲಕ್ಷ್ಮೀ, ಗಣಪತಿ, ಶ್ರೀನಿ ರಮೇಶ್, ಗುರುಪ್ರಸಾದ್, ಎ.ಆರ್.ಮಂಜುನಾಥ್, ಅರುಣಕುಮಾರ್, ಬಿ.ಆರ್.ಕೃಷ್ಣಮೂರ್ತಿ, ಎ.ಎನ್.ಪ್ರಕಾಶ್ ಪಾಲ್ಗೊಂಡಿದ್ದರು.