filter: 0; fileterIntensity: 0.000000; filterMask: 0; captureOrientation: 0; shaking: 0.536580; highlight: 1; algolist: 0; multi-frame: 1; brp_mask: 0; brp_del_th: 0.0000,0.0000; brp_del_sen: 0.0000,0.0000; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 159.0;aec_lux_index: 0;albedo: ;confidence: ;motionLevel: 0;weatherinfo: null;temperature: 29;zeissColor: bright; 
ಜಿಲ್ಲೆ

ಮಳೆಯ ನಡುವೆಯೂ ಹಾಸನದಲ್ಲಿ ಯಶಸ್ವಿಯಾಗಿ ನಡೆದ ತಿರಂಗ ಯಾತ್ರೆ

ಹಾಸನ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಶತ್ರುರಾಷ್ಟ್ರ ಪಾಕಿಸ್ತಾನದೊಳಕ್ಕೆ ನುಗ್ಗಿ ಉಗ್ರರು ಹಾಗೂ ಅವರ ಅಡಗುದಾಣಗಳನ್ನು ಸಂಹಾರ ಮಾಡಿದ ಭಾರತದ ಸೇನೆಯ ಸಾಹಸ ಬೆಂಬಲಿಸಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ನಗರದಲ್ಲಿ ಮಂಗಳವಾರ ಮಳೆಯ ನಡುವೆಯೂ ಮಠಾಧೀಶರು ಸೇರಿದಂತೆ ಸಾವಿರಾರು ಮಂದಿ ಬೃಹತ್ ರಾಷ್ಟ್ರಧ್ವಜ ಹಿಡಿದು ತಿರಂಗ ಯಾತ್ರೆ ನಡೆಸಿದರು.

ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ತಿರಂಗ ಯಾತ್ರೆಯಲ್ಲಿ ಸುಮಾರು 1 ಸಾವಿರ ಅಡಿ ಉದ್ದದ ತ್ರಿವರ್ಣ ಧ್ವಜ ಹಿಡಿದು ದೇಶಕ್ಕಾಗಿ ಹೋರಾಡುವ ಸೈನಿಕರಿಗೆ ಬಲ ಮತ್ತು ಮಾನಸಿಕ ಸ್ಥೈರ್ಯ ತುಂಬುವುದು ನಮ್ಮ ಉದ್ದೇಶ ಎಂದು ಘೋಷಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣ ಬಳಿಯಿಂದ ಸಾಲಗಾಮೆ ರಸ್ತೆಯಲ್ಲಿ ಹೊರಟ ಆಪರೇಷನ್ ಸಿಂಧೂರ ತಿರಂಗ ಯಾತ್ರೆಯಲ್ಲಿ ಸೈನಿಕರು, ಮಾಜಿ ಸೈನಿಕರು, ವಿವಿಧ ಮಠಾಧೀಶರು, ಮಹಿಳೆಯರು, ವಿದ್ಯಾರ್ಥಿಗಳು, ನಾಗರಿಕರು, ರಾಜಕೀಯ ಮುಖಂಡರು ಪಾಲ್ಗೊಂಡು ದೇಶದ ಪರ, ಸೇನೆಯ ಪರ ಹಾಗೂ ಉಗ್ರರ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಮಾಜಿ ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ಯೋಧರಿಗೆ ನೈತಿಕ ಸ್ಥೈರ್ಯ ತುಂಬಲು ನಗರದ ಅನೇಕರು ಸೇರಿ ತಿರಂಗ ಯಾತ್ರೆ ಆಯೋಜಿಸಿ, ಸೈನಿಕರ ಜತೆ ನಾವೂ ಕೈಜೋಡಿಸುವ ಕೆಲಸ ಮಾಡಿದ್ದೇವೆ. ಮಳೆಯ ನಡುವೆಯೂ ಯುವ ಸಮೂಹ, ರಸ್ತೆಗಳಿದು ದೇಶ ಕಾಯುವ ಸೈನಿಕರಿಗೆ ಬಲ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚಿಸಲು ಯಾತ್ರೆ ಮಾಡಿದ್ದಾರೆ ಎಂದರು.

ಯುವಕರಲ್ಲಿ ಹೆಚ್ಚಿನ ರಾಷ್ಟ್ರ ಭಕ್ತಿ ಮೂಡಲಿ, ಆ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಎಲ್ಲ ನಾಗರಿಕರಲ್ಲೂ ಇದೆ. ಈ ವಿಚಾರದಲ್ಲಿ ರಾಜಕಾರಣ ಸಲ್ಲದು. ಭಾರತ-ಪಾಕ್ ನಡುವೆ ಕದನ ವಿರಾಮ ಅಂತಾರಾಷ್ಟ್ರೀಯ ವಿಚಾರ ಆಗಿರುವುದರಿಂದ ನಮ್ಮ ರಾಷ್ಟ್ರೀಯ ನಾಯಕರು ಮಾತನಾಡುತ್ತಾರೆ. ಹಾಸನದಲ್ಲಿ ನಾವು ಮಾತನಾಡುವುದು ಸಮಂಜಸವಲ್ಲ. ಭಯೋತ್ಪಾದನೆ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿರುವುದರಿಂದ ಸೇನೆಯ ಸಾಹಸ ಬೆಂಬಲಿಸಿ ಬೃಹತ್ ತಿರಂಗ ಯಾತ್ರೆಯನ್ನು ಹಾಸನದಲ್ಲೂ ಯಶಸ್ವಿಗೊಳಿಸಲಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಏ.22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಜೀವ ತೆತ್ತರು. ಇದಕ್ಕೆ ಪ್ರತೀಕಾರವಾಗಿ ನಮ್ಮ ಸೇನೆ ಅಭೂತಪೂರ್ವ ಸಾಧನೆ ಮಾಡಿದೆ. ಪಾಕ್ ದಾಳಿಯನ್ನು ನಮ್ಮ ವೀರ ಯೋಧರು, ಕ್ಷಿಪಣಿಗಳು ಯಶಸ್ವಿಯಾಗಿ ತಡೆದಿವೆ. ವೀರ ಯೋಧರ ಸಾಹಸಕ್ಕೆ ಬೆಂಬಲ ವ್ಯಕ್ತಪಡಿಸಿ, ಮಾನಸಿಕ ಸ್ಥರ್ಯ ತುಂಬಲು ಹಾಗೂ ರಾಷ್ಟ್ರದ ಐಕ್ಯತೆಗಾಗಿ ನಾವೆಲ್ಲರೂ ತಿರಂಗ ಯಾತ್ರೆಯಲ್ಲಿ ಭಾಗಿಯಾಗಿದ್ದೇವೆ ಎಂದರು.

ತಿರಂಗ ಯಾತ್ರೆಯಲ್ಲಿ ನುಗ್ಗೇಹಳ್ಳಿಯ ಮಹೇಶ್ವರ ಶಿವಚಾರ್ಯ ಸ್ವಾಮಿಜಿ, ಹಳೇಬೀಡು ಪುಷ್ಪಗಿರಿ ಮಠದ ಸೋಮಶೇಖರ ಸ್ವಾಮೀಜಿ, ಕೆಸವತ್ತೂರು ಬಸವರಾಜೇಂದ್ರ ಸ್ವಾಮೀಜಿ, ದೊಡ್ಡ ಮಠ ಅರಕಲಗೂಡಿನ ಮಲ್ಲಿಕಾರ್ಜುನ ಸ್ವಾಮೀಜಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಅರ್‌ಎಸ್‌ಎಸ್ ಮುಖಂಡ ವಿಜಯಕುಮಾರ್, ಜಿಲ್ಲಾ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಪ್ರದೀಪ್ ಸಾಗರ್, ಬಿ. ದೊರೆರಾಜು, ಬಿ.ಕೆ. ವೆಂಕಟೇಶ್, ಪ್ರಭಾಕರ್, ಲೋಕೇಶ್, ಎಚ್.ಎನ್. ನಾಗೇಶ್, ಚನ್ನಕೇಶವ, ಹರ್ಷಿತ್, ವೇದಾವತಿ, ವಿಜಯಲಕ್ಷ್ಮೀ ಅಂಜನಪ್ಪ, ರತ್ನಮ್ಮ, ರಾಜಕುಮಾರ್, ಶೋಭನ್ ಬಾಬು, ನಗರಾಧ್ಯಕ್ಷ ಯೋಗೀಶ್, ಕಟ್ಟಾಯ ಶಿವಕುಮಾರ್ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.