ಬಣಕಲ್: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಅರ್ಭಟ ಮುಂದುವರಿದಿದ್ದು ವಿವಿಧೆಡೆ ಮನೆ, ಶಾಲೆ ಗೋಡೆಗಳು ಕುಸಿದಿವೆ.</p><p>ಅತ್ತಿಗೆರೆ ಸರ್ಕಾರಿ ಶಾಲೆ ಮೇಲ್ಛಾವಣಿ ಕುಸಿದು ಕೊಠಡಿಯೊಳಗೆ ನೀರು ಇಳಿಯುತ್ತಿದೆ. ವಿದ್ಯಾರ್ಥಿಗಳಿಗೆ ಬೇರೆ ಕೊಠಡಿಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಬಿನ್ನಡಿ ಗ್ರಾಮದ ರಮೇಶ್, ಪ್ರಮೀಳಾ ಅವರ ಮನೆ ಕುಸಿದಿದೆ.
ಬಣಕಲ್ ಗ್ರಾಪಂ ವ್ಯಾಪ್ತಿಯ ಚೇಗು ಗ್ರಾಮದ ಭವಾನಿ ಅವರ ಮನೆ ಗೋಡೆ ಕುಸಿದಿದ್ದು, ಸ್ಥಳಕ್ಕೆ ಬಣಕಲ್ ಗ್ರಾಪಂ ಅಧ್ಯಕ್ಷೆ ಲೀಲಾವತಿ, ಸದಸ್ಯರಾದ ಮಧು, ಆದಂ, ಕಾರ್ಯದರ್ಶಿ ಕೃಷ್ಣ, ಕರ ವಸೂಲಿಗಾರ ಸುಧೀರ್, ಸ್ಥಳೀಯರಾದ ಪ್ರವೀಣ್ ಗೌಡ, ಇರ್ವನ್ ಭೇಟಿ ನೀಡಿ ಪರಿಶೀಲಿಸಿದರು.