ಗುಬ್ಬಿ: ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಒಟ್ಟು 8 ಮನೆಗಳ ಮೇಲ್ಛಾವಣಿಯ ಶೀಟ್ ಹಾಗೂ ಶಾಲೆಯ ಮೇಲ್ಛಾವಣಿಯ ಶೀಟ್ ನೆಲಕ್ಕೆ ಉರುಳಿದೆ ಎಂದು ತಹಸೀಲ್ದಾರ್ ಬಿ.ಆರತಿ ತಿಳಿಸಿದರು.
ಹಾಗಲವಾಡಿ ಹೋಬಳಿಯ ಯಕ್ಕಲಕಟ್ಟೆ, ನಲ್ಲೂರು, ಮಂಚಲದೊರೆ, ಮುಚ್ಚವಿರನಹಳ್ಳಿ, ತೊಗರಿಘಟ್ಟದಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿಯ ಶೀಟ್, ಹಾಗಲವಾಡಿ ಹೋಬಳಿಯಲ್ಲಿ 6, ಚೇಳೂರು 1, ನಿಟ್ಟೂರು 1, ಧರೆಗೆ ಉರುಳಿದ ಶಾಲೆಯ ಜಿಂಗ್ ಶೀಟ್ ನೆಲಕ್ಕೆ ಉರುಳಿದೆ.
ತಾಲೂಕಿನಲ್ಲಿ ಕಳೆದ ವಾರದಲ್ಲಿ ಮಳೆರಾಯನಿಂದಾಗಿ ಧರೆಗೆ ಉರುಳಿದ ಸಂಖ್ಯೆ ಒಟ್ಟು 8 ಮನೆಯ ಮೇಲ್ಛಾವಣಿ ಶೀಟ್, ಒಂದು ಸರ್ಕಾರಿ ಶಾಲೆಯ ಮೇಲ್ಛಾವಣಿಯ ಶೀಟ್ ಬಿದಿದ್ದು, ಎನ್ಡಿಆರ್ಎಫ್ ಅಡಿ ಶೇ.15ರಷ್ಟು ಕಟ್ಟಡ ಸಮಸ್ಯೆ ಆಗಿದ್ದಲ್ಲಿ ಗ್ರಾಮ ಆಡಳಿತಾಧಿಕಾರಿ ಹಾಗೂ ಇಂಜಿನಿಯರ್ ಜಂಟಿ ಸರ್ವೇ ಕಾರ್ಯ ಮಾಡಿ ಅವರ ವರದಿಯನುಸಾರ ಮಾಹಿತಿ ಪಡೆದು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಯಮಾನುಸಾರ ಅನುದಾನ ಬಿಡುಗಡೆ ಆಗಲಿದೆ ಎಂದು ತಿಳಿಸಿದರು.
ತಾಲೂಕಿನ ಹಲವು ಕಡೆ ಅಡಕೆ, ತೆಂಗು ಬೆರಳೆಣಿಕೆಯಷ್ಟು ನೆಲಕ್ಕೆ ಉರುಳಿರುವ ಮಾಹಿತಿ ಇದ್ದು, ಶೇ.33ರಷ್ಟು ಬೆಳೆ ನಷ್ಟ ಆಗಿದ್ದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಯಮದಡಿ ಪರಿಹಾರ ನೀಡಲು ಅವಕಾಶವಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ ಬಳಿಕ ರೈತರ
ಖಾತೆಗೆ ನೇರ ಹಣ ವರ್ಗಾವಣೆ ಆಗಲಿದೆ ಎಂದು ತಿಳಿಸಿದರು.