ಜಿಲ್ಲೆ

ಮಳೆಗೆ ಬಿರುಕು ಬಿಟ್ಟ ಸೇತುವೆ, ವಾಹನ ಸಂಚಾರ ತಾತ್ಕಾಲಿಕ ಸ್ಥಗಿತ, ಡೋಣಿ ತೀರದಲ್ಲಿ ಸಂಚಾರ ಸಂಕಟ !

ವಿಜಯಪುರ: ಡೋಣಿ ನದಿಗೆ ಅಡ್ಡಲಾಗಿ‌ ಮಿಣಜಗಿ ಗ್ರಾಮದ ಬಳಿ

ರಾಜ್ಯ ಹೆದ್ದಾರಿ -61 ರಲ್ಲಿ ನಿರ್ಮಾಣವಾಗಿರುವ ಸೇತುವೆ ಬಿರುಕು ಬಿಟ್ಟಿದೆ.

ಸೇತುವೆ ಬೆಂಡಾಗಿದ್ದು ಕುಸಿದು ಬೀಳುವ ಆತಂಕ ಎದುರಾಗಿದೆ. ಹೀಗಾಗಿ ಸದ್ಯಕ್ಕೆ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.

ವಿಜಯಪುರ, ತಾಳಿಕೋಟೆ, ಮುದ್ದೇಬಿಹಾಳ ಸಂಪರ್ಕ ಬಂದ್ ಆಗಿದೆ.

ಇದರಿಂದ ದೇವರಹಿಪ್ಪರಗಿ ಪಟ್ಟಣದ ಮೂಲಕ ಸುತ್ತು ಹಾಕಿ ಪ್ರಯಾಣ ಬೆಳೆಸುವ ಅನಿವಾರ್ಯತೆ ಎದುರಾಗಿದೆ.

ನಿತ್ಯ ಇಪ್ಪತ್ತು ಸಾವಿರಕ್ಕೂ ಅಧಿಕ ವಾಹನಗಳು ಸಂಚಾರಿಸೋ ರಾಜ್ಯ ಹೆದ್ದಾರಿ-61ರ ಸ್ಥಳಕ್ಕೆ ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ಭೇಟಿ ಪರಿಶೀಲನೆ ನಡೆಸಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.