ಹನೂರು: ಬುಧವಾರ ರಾತ್ರಿ ಸುರಿದ ಜೋರು ಮಳೆಗೆ ತಾಲೂಕಿನ ಪಿ.ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾವಿನಮೂಲೆ ಗಿರಿಜನರ ಪೋಡಿನ ಸಣ್ಣೇಗೌಡನ ದೊಡ್ಡಿಯಲ್ಲಿ ಮನೆಯ ಛಾವಣಿ ಹಾಗೂ ಗೋಡೆ ಕುಸಿದಿದೆ.ಈ ಭಾಗದಲ್ಲಿ ಬುಧವಾರ ತಡರಾತ್ರಿ ಜೋರು ಮಳೆ ಸುರಿಯಿತು. ಪರಿಣಾಮ ಸಣ್ಣೇಗೌಡನ ದೊಡ್ಡಿಯ ಮಾದಪ್ಪ ಎಂಬವರ ಮನೆಯ ಛಾವಣಿ ಗೋಡೆ ಕುಸಿದಿದೆ. ಈ ವೇಳೆ ಮನೆಯಲ್ಲಿದ್ದ ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲ ಗೃಹೋಪಯೋಗಿ ವಸ್ತುಗಳು ಮಣ್ಣುಪಾಲಾಗಿವೆ.