ಸರಗೂರು: ಭಾರಿ ಮಳೆಗೆ ಸೋಮವಾರ ರಾತ್ರಿ ಪಟ್ಟಣದ ಮೂರನೇ ವಾರ್ಡ್‌ನಲ್ಲಿ ಮನೆ ಗೋಡೆ ಮತ್ತು ಛಾವಣಿ ಕುಸಿದು ಬಿದ್ದಿದ್ದು ಮನೆಯಲ್ಲಿದ್ದ ಒಬ್ಬರು ಗಾಯಗೊಂಡಿದ್ದಾರೆ.
ವಾರ್ಡ್ ನಿವಾಸಿ ಸೋಮಯ್ಯ ಎಂಬುವರು ಗಾಯಗೊಂಡವರು. 15 ದಿನಗಳಿಂದ ಹಿಂದೆ ಸುರಿದ ಮಳೆಗೆ ಮನೆಯ ಗೋಡೆಗಳು ಶಿಥಿಲಗೊಂಡಿದ್ದು, ಗೋಡೆಗೆ ಮರ ನೀಡಲು ಹೋದಾಗ ಸೋಮಯ್ಯ ಅವರ ಕಾಲಿನ ಮೇಲೆ ಗೋಡೆ ಬಿದ್ದಿದೆ. ಬಳಿಕ ಅಕ್ಕಪಕ್ಕದ ಮನೆಯವರು ವೃದ್ಧನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.