ಶೃಂಗೇರಿಯಲ್ಲಿ ನಿರಂತರ ಮಳೆಯಿಂದ ಸರ್ಕಾರಿ ಶಾಲೆಯ ಕಾಪೌಂಡ್ ಕುಸಿದಿರುವುದು. 
ಜಿಲ್ಲೆ

ಮಳೆಗೆ ಕುಸಿದ ಕಾಂಪೌಂಡ್

ಎಸ್.ಎನ್.ರವೀಂದ್ರ

ಶೃಂಗೇರಿ: ತಾಲೂಕಿನಲ್ಲಿ ಶುಕ್ರವಾರ ಮಳೆ ಎಡೆಬಿಡದೆ ಸುರಿಯಿತು.

ಶೃಂಗೇರಿ 32.0 ಮಿ.ಮೀ, ಕಿಗ್ಗಾ 63.4 ಕೆರೆಕಟ್ಟೆ 40 ಮಿ.ಮೀ ಮಳೆಯಾಗಿದೆ. ನಿರಂತರ ಮಳೆಯಿಂದ ಅಡಕೆಗೆ ಎಲೆಚುಕ್ಕೆ ರೋಗ ಹೆಚ್ಚಾಗಿದೆ. ಕಾಫಿ, ಕಾಳುಮೆಣಸು ಬೆಳೆಗಳಿಗೆ ಕೊಳೆ ರೋಗ ಉಂಟಾಗುವ ಆತಂಕ ಎದುರಾಗಿದೆ. ಕೆಲವು ಕಡೆ ಅಡಕೆ ಬೆಳೆಗಳಿಗೆ ಎರಡನೇ ಬಾರಿ ಔಷಧ ಸಿಂಪಡಣೆಗೆ ಮಳೆ ಅಡ್ಡಿಯಾಗಿದೆ. ತುಂಗಾನದಿ ಹರಿವು ಹೆಚ್ಚಾಗಿದೆ. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಕಾಂಪೌಂಡ್ ಕುಸಿದಿದೆ.