ಜಿಲ್ಲೆ

ಮಳೆಗೆ ಅಪಾರ ಬೆಳೆ ಹಾನಿ : ಆಥಿರ್ಕ ಸಂಕಷ್ಟಕ್ಕೆ ಸಿಲುಕಿದ ಅನ್ನದಾತ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಶಿ ರಾಶಿ ಆಲಿಕಲ್ಲು ಸೇರಿ ಪ್ರಾಕೃತಿಕ ವಿಕೋಪದಿಂದ ಬೆಳೆಗಳು ನಾಶವಾಗಿ ರೈತರು ನಷ್ಟ ಅನುಭವಿಸುವುದು ಹೆಚ್ಚಾಗಿದೆ.

ಕಳೆದ ಎರಡು ದಿನಗಳಿಂದಲೂ ಬಿರುಗಾಳಿ ಸಹಿತ ಮಳೆ, ಆಲಿಕಲ್ಲು ಹಲವು ಅವಾಂತರಗಳಿಗೆ ಕಾರಣವಾಗಿದೆ. ಜಿಲ್ಲೆಯ ಚಿಕ್ಕಬಳ್ಳಾಪುರ, ಶಿಡ್ಲಟ್ಟ ತಾಲೂಕು ವ್ಯಾಪ್ತಿಯಲ್ಲಿ ದ್ರಾ, ಟೊಮ್ಯಾಟೊ, ಹಿಪ್ಪುನೇರಳೆ, ತರಕಾರಿ ಸೇರಿ ಹಲವು ಬೆಳೆಗಳು ಮಳೆಯಿಂದ ಹಾಳಾಗಿವೆ. ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ವೆಂಕಟಾಪುರದಲ್ಲಿ ಹೊಸದಾಗಿ ನಿಮಿರ್ಸಿದ್ದ ಕೋಳಿ ಶೆಡ್​ ಬಿದ್ದು ಹೋಗಿದೆ. ಇದರಿಂದ ಲಾಂತರ ರೂಪಾಯಿ ಬಂಡವಾಳ ಹಾಕಿರುವ ರೈತ ಕಣ್ಣೀರು ಸುರಿಸುವಂತಾಗಿದೆ.

ಹಲವೆಡೆ ಧರೆಗುರುಳಿದ ಮರಗಳು: ಕೆಲವೆಡೆ ಸುರಿದ ಭಾರಿ ಮಳೆ ವೇಳೆ ಸಿಡಿಲು ಬಡಿದು, ತೆಂಗಿನ ಮರ, ತೇಗ, ಹಲಸು ಸೇರಿ ಬೃಹತ್​ ಮರಗಳು ನೆಲಕ್ಕೆ ಉರುಳಿವೆ. ಇದರ ಮಧ್ಯೆ ಬೆಳೆದ ಬೆಳೆಗಳು ಹಾಳಾಗಿವೆ. ಇನ್ನು ಮಳೆಯ ನೀರು ತೋಟಗಳಿಗೆ ನುಗ್ಗಿವೆ. ಚಿಕ್ಕಬಳ್ಳಾಪುರ ತಾಲೂಕಿನ ಕಣಿತಹಳ್ಳಿಯಲ್ಲಿ ನಾರಾಯಣಪ್ಪ ಎಂಬುವವರ ತೋಟದಲ್ಲಿನ ತೇಗದ ಮರಗಳು ಸಿಡಿಲು ಬಡಿದು ನೆಲಕ್ಕುರುಳಿದ್ದು, ಪಕ್ಕದಲ್ಲೇ ಇದ್ದ ದ್ರಾ ಬೆಳೆಯ ಕೂಚಗಳು ಮುರಿದಿವೆ.

ಅಲ್ಲಲ್ಲಿ ದೊಡ್ಡಗಾತ್ರದ ಆಲಿಕಲ್ಲು: ಚಿಕ್ಕಬಳ್ಳಾಪುರ ತಾಲೂಕಿನ ಜಾತವಾರ, ಜಾತವಾರಹೊಸಹಳ್ಳಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಬೃಹತ್​ ಗಾತ್ರದ ಆಲಿಕಲ್ಲುಗಳು ಬಿದ್ದಿವೆ. ಕೆ.ಜಿ.ಗಟ್ಟಲೇ ತೂಕದ ಕಲ್ಲುಗಳನ್ನು ಹಿಡಿದುಕೊಂಡು ಕೆಲವರು ಖುಷಿಪಟ್ಟರೆ, ಮತ್ತೆ ಹಲವರು ತೋಟಗಳ ನಾಶದಿಂದ ಕಣ್ಣೀರು ಸುರಿಸುತ್ತಿದ್ದಾರೆ. ಆಲಿಕಲ್ಲು ಬಿದ್ದ ಹಿನ್ನೆಲೆಯಲ್ಲಿ ಬೆಳೆಗಳಲ್ಲಿನ ಬಹುಪಾಲು ಎಲೆಗಳು ಛಿದ್ರವಾಗುತ್ತವೆ. ಹೆಚ್ಚಿನ ತೇವಾಂಶ ಆಗುವುದರಿಂದ ಬೆಳೆಗಳ ಬೇರುಗಳು ಬಹುಬೇಗ ಕೊಳೆತು ಹೋಗುತ್ತಿವೆ. ಇನ್ನೊಂದೆಡೆ ದ್ರಾ ಗೊನೆ ಹಾಗೂ ಎಲೆಗಳು ಹಾನಿಯಾಗಿರುವುದರಿಂದ ಒಳ್ಳೆಯ ಇಳುವರಿ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿವೆ. ಈಗಾಗಲೇ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆಯ ಅಧಿಕಾರಿಗಳು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಬೆಳೆ ನಷ್ಟದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ತರಕಾರಿ ಬೆಲೆ ಏರಿಕೆಯ ಬಿಸಿ: ಕಳೆದ 15&20 ದಿನಗಳಿಂದಲೂ ಜಿಲ್ಲೆಯಲ್ಲಿ ಆಗಾಗ ಮಳೆ ಸುರಿಯುತ್ತಲೇ ಇದೆ. ಅದರಲ್ಲೂ ಬಿರುಗಾಳಿ, ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಮಳೆ ಸುರಿಯುತ್ತಿರುವುದು ರೈತರನ್ನು ಕಂಗೆಡಿಸಿದೆ. ಬೆಳೆಗಳ ರಕ್ಷಣೆಯು ದೊಡ್ಡ ಸವಾಲಾಗಿದೆ. ಮಳೆಯಿಂದ ತರಕಾರಿ, ಹಣ್ಣು ಹಾಗೂ ಹೂವಿನ ಬೆಳೆಗಳಿಗೆ ನಾನಾ ರೀತಿಯ ರೋಗಗಳು ಕಾಡುತ್ತಿವೆ. ಇದರಿಂದ ಮಾರುಕಟ್ಟೆಗೆ ತರಕಾರಿ ಅವಕ ಪ್ರಮಾಣ ಕಡಿಮೆಯಾಗಿದ್ದು ಉತ್ಪನ್ನದ ಬೆಲೆ ಏರಿಕೆಯಾಗುತ್ತಿದೆ. ಆದರೆ, ಇದರ ಲಾಭ ಮಾತ್ರ ರೈತರಿಗೆ ಸಿಗುತ್ತಿಲ್ಲ. ಮತ್ತೊಂದೆಡೆ ದುಬಾರಿ ದರದ ಹೊರೆಯು ಗ್ರಾಹಕರ ಮೇಲೆ ಬೀಳುತ್ತಿದೆ.

ನಿರಂತರ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯು ಆತಂಕ ಮೂಡಿಸಿದೆ. ಈಗಾಗಲೇ ಹಲವು ಗ್ರಾಮಗಳಲ್ಲಿ ಬೆಳೆ ಹಾಳಾಗಿವೆ. ಇದರ ನಡುವೆ ಜಮೀನಿನಲ್ಲಿ ದ್ರಾ ಬೆಳೆಯನ್ನು ಕಾಪಾಡಿಕೊಳ್ಳುವುದು ದೊಡ್ಡ ತಲೆ ನೋವಾಗಿ ಪರಿಣಿಮಿಸಿದೆ. ಮುನಿರಾಜು, ರೈತ, ಜಾತವಾರ