ಜಿಲ್ಲೆ

ಮಳೆಗಾಲದಲ್ಲಿ ಕಟ್ಟೆಚ್ಚರದಿಂದ ಇರಲು ಸಲಹೆ

ಹುಬ್ಬಳ್ಳಿ: ಇಲ್ಲಿಯ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಹು-ಧಾ ಸೆಂಟ್ರಲ್ ಕ್ಷೇತ್ರದ ಪಾಲಿಕೆ ಸದಸ್ಯರ ಸಭೆ ಗುರುವಾರ ಜರುಗಿತು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕಳೆದ ಮೂರು -ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಸುರಿದ ಭಾರಿ ಮಳೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಪಾಲಿಕೆ ಆಯುಕ್ತರ ಸಹಕಾರ ಕೋರಿದಾಗ ಚುನಾವಣೆ ನೀತಿ ಸಂಹಿತೆ ಜಾರಿ ಇದೆ ಎಂದರು. ಯಾವೊಬ್ಬರ ಅಧಿಕಾರಿಯೂ ನಾನು ಭೇಟಿ ನೀಡಿದಾಗ ಹಾಜರಿರಲಿಲ್ಲ. ಹಾಗಾಗಿ ನಿಮ್ಮ ವಾರ್ಡ್‌ಗಳಲ್ಲಿ ಮಳೆಗಾಲದಲ್ಲಿ ಕಟ್ಟೆಚ್ಚರ ವಹಿಸಬೇಕು. ಪಾಲಿಕೆ ಅಧಿಕಾರಿಗಳಿಂದ ಕೆಲಸ ಪಡೆದುಕೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಮಹಾಪೌರ ವೀಣಾ ಬರದ್ವಾಡ, ಸದಸ್ಯರಾದ ಸಂತೋಷ ಚವ್ಹಾಣ, ರಾಜಣ್ಣ ಕೊರವಿ, ಪ್ರಮುಖರಾದ ಸಿದ್ದು ಮೊಗಲಿಶೆಟ್ಟರ್, ದತ್ತಮೂರ್ತಿ ಕುಲಕರ್ಣಿ ಇತರರು ಇದ್ದರು.