ಜಿಲ್ಲೆ

ಮಳೆಗಾಗಿ ಸಕ್ರಹಳ್ಳಿಯಲ್ಲಿ ಸಪ್ತಭಜನೆ

ಹಗರಿಬೊಮ್ಮನಹಳ್ಳಿ: ಮಳೆಗಾಗಿ ಸಕ್ರಹಳ್ಳಿ ಗ್ರಾಮಸ್ಥರು ದೇವರ ಮೊರೆಹೋಗಿದ್ದು, ದೇಗುಲದಲ್ಲಿ ಭಾನುವಾರ ಸಪ್ತಭಜನೆ ಮಾಡಿದರು. ನಿರಂತರ 25 ಗಂಟೆ ಸಪ್ತಭಜನೆ ನಡೆಯಿತು.

ಸೋಮವಾರ ಬೆಳಗಿನ ಜಾವ ಭಜನೆ ಬಳಿಕ ಗ್ರಾಮಸ್ಥರಿಂದ ಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಪ್ರಮುಖರಾದ ಮಲ್ಲಿಕಾರ್ಜುನಗೌಡ, ಎಚ್.ಮಂಜುನಾಥ, ಮಲ್ಲನಗೌಡ, ಗಡ್ಡಿ ಮುದುಕಪ್ಪ, ಎ.ನೀಲಿಗಿರಿಯಪ್ಪ, ಗಡ್ಡಿ ಪಂಪಣ್ಣ, ಎಂ.ಮಣಬಸಪ್ಪ, ಎ.ಕರಿಬಸಪ್ಪ, ಜೆ.ಜಂಬಣ್ಣ, ಕೆ.ಮಂಜುನಾಥ, ಸಿ.ಕರಿಬಸಪ್ಪ ಇತರರಿದ್ದರು.