ಕಳಸ ಕಲಶೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪರ್ಜನ್ಯಹೋಮ ಮಾಡಲಾಯಿತು. 
ಜಿಲ್ಲೆ

ಮಳೆಗಾಗಿ ಕಲಶೇಶ್ವರ ಸ್ವಾಮಿಗೆ ಪೂಜೆ

ಕಳಸ: ಮಳೆಗಾಗಿ ಪ್ರಾರ್ಥಿಸಿ ಕಲಶೇಶ್ವರ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಶ್ರೀ ಕಲಶೇಶ್ವರ ಸ್ವಾಮಿ ದೇವರ ಸನ್ನಿಧಿಯಲ್ಲಿ ಶನಿವಾರ ಶತವಾರ ರುದ್ರಾಭಿಷೇಕ, ಏಕದಶರುದ್ರಹೋಮ, ಪರ್ಜನ್ಯಜಪ ಮತ್ತು ಪರ್ಜನ್ಯಹೋಮ, ಸರ್ವಾಂಗಸುಂದರೀ ಅಮ್ಮನವರ ಸನ್ನಿಧಿಯಲ್ಲಿ ಸಹಸ್ರನಾಮ ಕುಂಕುಮಾರ್ಚನೆ, ಆನೆ ವಿಘ್ನೇಶ್ವರಸ್ವಾಮಿ ಸನ್ನಿಧಿಯಲ್ಲಿ ಅಷ್ಟೋತ್ತರ, ಪಂಚಕಜ್ಜಾಯ ನಿವೇದನೆ, ಶ್ರೀ ಕ್ಷೇತ್ರಪಾಲ ಸನ್ನಿಧಿಯಲ್ಲಿ ಚರು ಬಲಿ ಸಮರ್ಪಣೆ ಹಾಗೂ ಕಲಶೇಶ್ವರಸ್ವಾಮಿಗೆ ಮಹಾಪೂಜೆ ನೆರವೇರಿಸಲಾಯಿತು. ಕಳಸ ಹಾಗೂ ಸುತ್ತಮುತ್ತಲಿನ ಕೃಷಿಕರು, ಗ್ರಾಮಸ್ಥರು ಭಾಗಿಯಾಗಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.