ಕಕ್ಕೇರಾದಲ್ಲಿ ಸುರಿದ ಭಾರಿ ಮಳೆಗೆ ಯಲ್ಲಮ್ಮನ ಕೆರೆ ಬಳಿ ನಾಟಿ ಮಾಡಿದ್ದ ಭತ್ತ ಕೊಚ್ಚಿ ಹೋಗಿರುವುದು.  
ಜಿಲ್ಲೆ

ಮಳೆ ನೀರಿಗೆ ಕೊಚ್ಚಿಹೋದ ಭತ್ತ

ಕಕ್ಕೇರಾ: ವಲಯಾದ್ಯಾಂತ ಶನಿವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ನಾಟಿ ಮಾಡಿದ್ದ ಭತ್ತ ನೀರಿಗೆ ಕೊಚ್ಚಿ ಹೋದರೆ, ಶಾಲಾ-ಕಾಲೇಜು ಮತ್ತು ಉಪ ಪೊಲೀಸ್ ಠಾಣೆ ಮಳೆ ನೀರಿನಿಂದ ಜಲಾವೃತಗೊಂಡ ಘಟನೆ ನಡೆದಿದೆ.

ಒಂದು ವಾರದಿಂದ ಮಳೆ ಇಲ್ಲದೆ ಬಿಸಿಲಿನ ಧಗೆಯಿಂದ ತತ್ತರಿಸಿದ ಜನತೆಗೆ ಶನಿವಾರ ಬೆಳಗಾಗುತ್ತಿದ್ದಂತೆ ಅಬ್ಬರದ ಮಳೆಯಾಗಿದ್ದು ನೋಡಿ ಗಾಬರಿಗೊಂಡು ರೈತರು ಜಮೀನುಗಳತ್ತ ಧಾವಿಸಿ ನೋಡುತ್ತಿದ್ದಂತೆ ನಾಟಿ ಮಾಡಲಾಗಿದ್ದ ಭತ್ತ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರೆ ಸಜ್ಜೆ, ಹತ್ತಿ, ತೊಗರಿ ಬೆಳೆಗಳಲ್ಲಿ ಭಾರಿ ಪ್ರಮಾಣದ ನೀರು ತುಂಬಿಕೊAಡಿದೆ ಎಂದು ರೈತ ಬಸಣ್ಣ ಜೋಗ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನೀರು ತುಂಬಿಕೊAಡಿದ್ದರಿAದ ಶನಿವಾರ ನೀರಿನಲ್ಲಿಯೇ ನಿಂತು ಪ್ರಾರ್ಥನೆ ಮಾಡುವಂತಾಯಿತು. ಅಲ್ಲದೆ ಸ್ಥಳೀಯ ಉಪ ಪೊಲೀಸ್ ಠಾಣೆಗೆ ಹಳ್ಳದ ನೀರು ನುಗ್ಗಿದ್ದರಿಂದ ಕೆಲ ಹೊತ್ತು ಠಾಣೆ ದ್ವೀಪವಾಗಿ ಕಂಡು ಬಂತು.

ಮಳೆಯ ಜತೆಗೆ ಸಿಡಿಲಿನ ಹೊಡೆತಕ್ಕೆ ಕೆಲ ಅಂಗಡಿ ಮತ್ತು ಮನೆಗಳಲ್ಲಿ ಲೈಟ್ ಮತ್ತು ಫ್ಯಾನ್‌ಗಳು ಸುಟ್ಟು ಹೋಗಿವೆ. ಅಲ್ಲದೆ ರಾಯಗೇರಾ ಕೆರೆ ತುಂಬಿದ್ದರಿAದ ಕಕ್ಕೇರಾ-ದೇವತ್ಕಲ್ ಸಂಪರ್ಕ ಕಡಿತಗೊಂಡ ಕಾರಣ ಸಂಚಾರಕ್ಕೆ ಪರದಾಡಬೇಕಾಯಿತು.

ಏದಲಭಾವಿ ಸಮೀಪದ ಹಳ್ಳಕ್ಕೆ ಭಾರಿ ಮಳೆ ನೀರು ಬಂದ ಕಾರಣ ಶಾಲಾ ಮಕ್ಕಳು, ಶಿಕ್ಷಕರು ಮತ್ತು ರೈತರು ನೀರು ಕಡಿಮೆಯಾದ ಮೆಲೆ ಮನೆಗೆ ತೆರಳಬೇಕಾಯಿತು ಎಂದು ಗ್ರಾಮದ ಅಮರೇಶ ಹಡಪದ ಮಾಹಿತಿ ನೀಡಿದರು.