ಜಿಲ್ಲೆ

ಮಳೆ ನಿಂತರೂ ಜಿನುಗುವ ಬೆಳಕೇರಾ ಸರ್ಕಾರಿ ಶಾಲೆ!

Bidar

ಸಂಜೀವಕುಮಾರ ಜುನ್ನಾ ಚಿಟಗುಪ್ಪ
ಸಂಪೂರ್ಣ ಶಿಥಿಲಗೊಂಡ ಕಟ್ಟಡ. ಮಳೆಯಾಗುತ್ತಲೇ ಸೋರುವ ಕೊಠಡಿಗಳು. ಮಳೆ ನಿಂತರೂ ಜಿನುಗುವ ಕೋಣೆಗಳಲ್ಲೇ ಕಲಿಕೆ-ಬೋಧನೆ ಮಾಡುವ ಅನಿವಾರ್ಯ. ಮಿನಿ ಕೆರೆಯಂತಾಗುವ ಶಾಲೆ ಆವರಣ…

ಇದು ಬೆಳಕೇರಾ ಗ್ರಾಮದ ಸಕರ್ಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ. 1ರಿಂದ 8ನೇ ತರಗತಿ ಕನ್ನಡ ಮಾಧ್ಯಮದಲ್ಲಿ 180 ಹಾಗೂ 1ರಿಂದ 4ನೇ ತರಗತಿಯ ಆಂಗ್ಲ ಮಾಧ್ಯಮದಲ್ಲಿ 75 ಮಕ್ಕಳು ಓದುತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಕರ ಕೊರತೆ ಇಲ್ಲ. ಆದರೆ ಆಂಗ್ಲ ಮಾಧ್ಯಮಕ್ಕೆ ಆರಂಭದಿಂದಲೂ ಶಿಕ್ಷಕರ ಕೊರತೆ ಕಾಡುತ್ತಿದೆ.

ಈ ಎರಡೂ ಮಾಧ್ಯಮ ಸೇರಿ ಶಾಲೆ ಆವರಣದಲ್ಲಿ 13 ಕೋಣೆಗಳಿವೆ. ಈ ಪೈಕಿ 4 ಕೋಣೆ ಶಿಥಿಲಗೊಂಡಿದ್ದರಿಂದ ಬಳಕೆ ಮಾಡದೆ ಮುಚ್ಚಲಾಗಿದೆ. ಉಳಿದ 9ರಲ್ಲಿ 4 ಕೊಠಡಿಗಳು ಸಹ ಬಿರುಕು ಬಿಟ್ಟು ಶಿಥಿಲಗೊಂಡಿದ್ದು, ಮಳೆಯಾದಾಗ ಸೋರುತ್ತವೆ. ಗೋಡೆಗಳು ಹಸಿ ಹಿಡಿದಿವೆ. ಇಂಥದರಲ್ಲೇ ತರಗತಿಗಳು ನಡೆಯುತ್ತಿವೆ. ಇನ್ನು ಒಂದು ಕೋಣೆ ಸಿಬ್ಬಂದಿಗೆ ಮೀಸಲಾಗಿದ್ದು, ಮಳೆಯಾಗುತ್ತಿದ್ದರೆ ನಾಲ್ಕು ಕೋಣೆಗಳಲ್ಲೇ ಕನ್ನಡ ಮತ್ತು ಆಂಗ್ಲ ಮಾಧ್ಯಮ ಮಕ್ಕಳಿಗೆ ಪಾಠ ಬೋಧನೆ ಮಾಡುವಂಥ ಸ್ಥಿತಿ ಇದೆ.

ಮಕ್ಕಳು ಮತ್ತು ಶಿಕ್ಷಕರು ಜೀವ ಭಯದಲ್ಲಿಯೇ ದಿನದೂಡುತ್ತಿದ್ದರೆ, ಕೋಣೆಗಳ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೂ ಪೆಟ್ಟು ಬೀಳುವಂತಾಗಿದೆ. ಮಳೆ ನೀರು ನಿಂತು ಶಾಲೆ ಆವರಣ ಕೆರೆಯಂತಾಗಿದೆ. ಆದರೂ ಸಂಬಂಧಿತ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಕಡೆ ಗಮನಹರಿಸದೆ ದಿವ್ಯ ನಿರ್ಲಕ್ಷೃ ತೋರುತ್ತಿದ್ದಾರೆ ಎಂಬುದು ಪಾಲಕರ ದೂರು.

ಶಿಥಿಲಗೊಂಡ ಕೋಣೆಗಳು ಮಕ್ಕಳ ಜೀವಕ್ಕೆ ಕುತ್ತಾಗಿ ಪರಣಮಿಸಿದರೆ, ಕೋಣೆಗಳ ಕೊರತೆ ಬುನಾದಿ ಹಂತದ ಶಿಕ್ಷಣದಿಂದಲೂ ಮಕ್ಕಳನ್ನು ವಂಚಿತಗೊಳ್ಳುವಂತೆ ಮಾಡಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ವಿಜಯವಾಣಿ ಪ್ರತಿನಿಧಿ ಎದುರು ಪಾಲಕರು ಅಕ್ರೋಶ ಹೊರಹಾಕಿದರು. ಸಂಬಂಧಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಬೆಳಕೇರಾ ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಿಥಿಲಗೊಂಡ ಕೋಣೆಗಳು ಮತ್ತು ಇತರ ಸಮಸ್ಯೆಗಳ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.
| ಶಿವಕುಮಾರ, ಸಿಆರ್ಸಿ

ಗ್ರಾಮದ ಪ್ರಾಥಮಿಕ ಸಕರ್ಾರಿ ಶಾಲೆಯಲ್ಲಿ ಶಿಥಿಲಗೊಂಡಿರುವ ಕೋಣೆಗಳನ್ನು ಕೂಡಲೇ ನೆಲಸಮ ಮಾಡುವುದರ ಜತೆಗೆ ಸುಸಜ್ಜಿತ ನೂತನ ಕೊಠಡಿಗಳನ್ನು ನಿಮರ್ಿಸಿ ಮಕ್ಕಳಿಗೆ ತೊಂದರೆ ಆಗುತ್ತಿರುವುದನ್ನು ತಪ್ಪಿಸಬೇಕು. ಇಲ್ಲದಿದ್ದಲ್ಲಿ ಪಾಲಕರು ಮತ್ತು ಗ್ರಾಮಸ್ಥರು ಸೇರಿ ಹೋರಾಟ ನಡೆಸಬೇಕಾಗುತ್ತದೆ.
| ಬಸವರಾಜ, ಗ್ರಾಮಸ್ಥ

ಶಾಲೆ ಕೋಣೆಗಳು ಶಿಥಿಲಗೊಂಡಿದ್ದರಿಂದ ಮಳೆ ಇದ್ದರೆ ಸಕರ್ಾರದ ಆದೇಶದಂತೆ 1ರಿಂದ 5 ತರಗತಿ ಮಕ್ಕಳಿಗೆ ರಜೆ ನೀಡಲಾಗಿತ್ತು. ಉಳಿದ ತರಗತಿವರಿಗೆ ಇರುವ ಸುಸಜ್ಜಿತ ಕೊಠಡಿಗಳಲ್ಲಿ ತರಗತಿ ನಡೆಸಿದ್ದು, ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಶಾಲಾ ಆವರಣದಲ್ಲಿ ಮಳೆ ನೀರು ನಿಂತು ಮಕ್ಕಳಿಗೆ ತೊಂದರೆ ಆಗುತ್ತಿರುವುದುನ್ನು ಗ್ರಾಪಂ ಅಧಿಕಾರಿ ವೀಕ್ಷಿಸಿದ್ದು, ಸರಿಪಡಿಸುವ ಭರಸವೆ ನೀಡಿದ್ದಾರೆ.
| ತನುಜಾ, ಮುಖ್ಯಶಿಕ್ಷಕ