ಜಿಲ್ಲೆ

ಮಳೆ ಅಬ್ಬರಕ್ಕೆ ಎರಡು ಎಮ್ಮೆ ಬಲಿ-ಸಂಕಷ್ಟದಲ್ಲಿ ರೈತ ಕುಟುಂಬ...!

ಮಂಡ್ಯ: ಜೋರು ಮಳೆ ಮತ್ತು ಬಿರುಗಾಳಿಗೆ ಕೊಟ್ಟಿಗೆಯ ಗೋಡೆ ಕುಸಿದು ಎರಡು ಎಮ್ಮೆ ಮೃತಪಟ್ಟು, ಇನ್ನೆರೆಡು ಎಮ್ಮೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಬಿ.ಬಾಚಹಳ್ಳಿ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಸುರಿದ ಮಳೆಯಿಂದಾಗಿ ಗೋಡೆ ಶಿಥಿಲಗೊಂಡಿತ್ತು. ಪರಿಣಾಮ ವೆಂಕಟೇಗೌಡ ಎಂಬುವರ ಮನೆಯ ಎಡಭಾಗದ ಗೋಡೆ ಎಮ್ಮೆಗಳ ಮೇಲೆ ಕುಸಿದು ಬಿದ್ದಿದೆ. ಶನಿವಾರ ಸ್ಥಳಕ್ಕೆ ಬೂಕನಕೆರೆ ಪಶು ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೂಕನಕೆರೆ ಗ್ರಾಪಂ ಪಿಡಿಒ ನರಸಿಂಹರಾಜು ಇದ್ದರು. ಇನ್ನು ಘಟನೆಯಿಂದ ಸಾವಿರಾರೂ ರೂ ನಷ್ಟವಾಗಿದ್ದು, ಸೂಕ್ತ ಪರಿಹಾರ ಕೊಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.