ಬಳ್ಳಾರಿ : ನಗರದ ಜಿಲ್ಲಾ ಹಾಗೂ ಉಪ ನೋಂದಾಣಿ ಕಚೇರಿ ಆವರಣದಲ್ಲಿನ ಪತ್ರ ಬರಹಗಾರರ ಮಳಿಗೆಗಳನ್ನು ತೆರವುಗೊಳಿಸದಂತೆ ಒತ್ತಾಯಿಸಿ ಮಾಜಿ ಸಚಿವ ಬಿ. ಶ್ರೀರಾಮುಲು ಶನಿವಾರ ಪ್ರತಿಭಟಿಸಿದರು.
ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಕಳೆದ ನಾಲವತ್ತು ವರ್ಷಗಳಿಂದ ಪತ್ರಬರಹಗಾರರು ಮಳಿಗೆಗಳನ್ನು ನಿರ್ಮಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರ ಏಕಾಏಕಿ ಮಳಿಗೆಗಳ ತೆರವಿಗೆ ಮುಂದಾದರೆ ಬರಹಗಾರರು ಸಂಕಷ್ಟ ಪಡಬೇಕಾಗುತ್ತದೆ. ಕೂಡಲೇ ಸರ್ಕಾರ ತೆರವಿನ ಆದೇಶ ಹಿಂಪಡೆಯಬೇಕು ಎಂದರು.
ಇದೇ ವೇಳೆ ಕಂದಾಯ ಸಚಿವ ಕೃಷ್ಣ ಬೈರೆಗೌಡ ಅವರಿಗೆ ಮೊಬೈಲ್ ಕಾಲ್ ಮೂಲಕ ಸಂಪರ್ಕಿಸಿದರು. ಅವರು ಕರೆ ಸ್ವೀಕರಿಸಿ ಸಭೆಯಲ್ಲಿದ್ದು ಬಳಿಕ ಮಾತನಾಡುವೆ ಎಂದು ತಿಳಿಸಿದರು. ಮಳಿಗೆಗಳ ತೆರವಿನ ಆದೇಶ ಹಿಂಪಡೆಯವರಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಸರ್ಕಾರದ ಆದೇಶದಂತೆ ಮಳಿಗೆಗಳ ತೆರವುಗೆ ಆದೇಶ ನೀಡಲಾಗಿದೆ ಎಂದು ಜಿಲ್ಲಾ ನೋಂದಾಣಿಧಿಕಾರಿ ಶ್ರೀರಾಮುಲು ಅವರಿಗೆ ತಿಳಿಸಿದರು.