ಅರಸೀಕೆರೆ: ನಗರದ ಸಂತೇ ಮೈದಾನದಲ್ಲಿ ಅತಿಕ್ರಮಿಸಿರುವ ತರಕಾರಿ ಮಳಿಗೆಗಳನ್ನು ತೆರವುಗೊಳಿಸದಿದ್ದರೆ ನಿರ್ಧಾಕ್ಷಿಣ್ಯ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಕಂದಾಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ನಗರಸಭೆಯಲ್ಲಿ ಸೋಮವಾರ ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಸಂತೆ ಮೈದಾನದಲ್ಲಿರುವ ಕೆಲ ಮಳಿಗೆಗಳನ್ನು ತರಕಾರಿ ವರ್ತಕರು ಬಾಡಿಗೆ ನೀಡದೇ ಅತಿಕ್ರಮಿಸಿಕೊಂಡಿರುವ ದೂರುಗಳು ಕೇಳಿ ಬಂದಿವೆ. ಈ ಸಂಬಂಧ ಹಲವು ಬಾರಿ ಮೌಖಿಕ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಅಲ್ಲದೇ ನಗರಸಭೆಗೆ ಬರುವ ಆದಾಯವೂ ಕೈತಪ್ಪಿ ಹೋಗುತ್ತಿದ್ದು ತಕ್ಷಣವೇ ತೆರವಿಗೆ ಸೂಚನೆ ನೀಡಬೇಕು.ನಿಮ್ಮ ಮಾತಿಗೆ ಮನ್ನಣೆ ನೀಡದಿದ್ದರೆ ಹೊಸ ಬೀಗ ಹಾಕಿ ಎಂದು ಕಂದಾಯ ಅಧಿಕಾರಿರಾಜೇಶ್‌ಗೆ ಸೂಚಿಸಿದರು.
ರೌಂಡ್ಸ್:
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನಗರದ ಅಭಿವೃದ್ಧಿಗೆ ಅನುದಾನದ ಮಹಾಪೂರವೇ ಹರಿದು ಬಂದಿದ್ದು ರಸ್ತೆ, ಚರಂಡಿ ಸೇರಿ ಹಲವು ಕೆಲಸಗಳು ಪ್ರಗತಿಯಲ್ಲಿವೆ.ಮಳೆ ಕಡಿಮೆಯಾದ ಬಳಿಕ ನಗರ ಪ್ರದಕ್ಷಿಣೆ ನಡೆಸಿ ಸಾರ್ವಜನಿಕರ ಕುಂದು, ಕೊರತೆ ಆಲಿಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.ಮುಖಂಡರಾದ ಖುಷಿಬಾಬು, ಸತೀಶ್, ಬಸಪ್ಪ ಸೇರಿ ಇನ್ನಿತರರು ಹಾಜರಿದ್ದರು.