ಬಾಗಲಕೋಟೆ ನಗರದಲ್ಲಿ ಗುರುವಾರ ಬಿಜೆಪಿ ರಾಜ್ಯ ಘಟಕದಿಂದ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಅವರಿಗೆ ಬಿಜೆಪಿ ಜಿಲ್ಲಾ ನೇಕಾರರ ಪ್ರಕೋಷ್ಠದ ಪದಾಽಕಾರಿಗಳಾದಮಂಜುನಾಥ ಹಣಗಿ, ಪ್ರಶಾಂತ ಜವಳಿ, ಶೀಲಾನಂತ ಬದೋಡಗಿ ಮನವಿ ಸಲ್ಲಿಸಿದರು. 
ಜಿಲ್ಲೆ

ಮಳಿಗೆ ಆರಂಭಿಸಲು ಒತ್ತಾಯ

ಬಾಗಲಕೋಟೆ: ನೇಕಾರರು ಕಷ್ಟದಲ್ಲಿದ್ದು, ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ತುರ್ತಾಗಿ ಸರ್ಕಾರದಿಂದ ವಸöದ್ಯೋಮ ಮಳಿಗೆ ಪ್ರತಿ ಜಿಲ್ಲೆಯಲ್ಲಿ ಆರಂಭಿಸಬೇಕು ಎಂದು ಒತ್ತಾಯಸಬೇಕು ಎಂದು ಬಿಜೆಪಿ ಜಿಲ್ಲಾ ನೇಕಾರರ ಪ್ರಕೋಷ್ಠದ ಪದಾಽಕಾರಿಗಳು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ನಗರದಲ್ಲಿ ಗುರುವಾರ ಬಿಜೆಪಿ ರಾಜ್ಯ ಘಟಕದಿಂದ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯಲ್ಲಿ ಮನವಿ ಸಲ್ಲಿಸಿದ ಪ್ರಕೋಷ್ಠದ ಸಂಚಾಲಕರಾದ ಮಂಜುನಾಥ ಹಣಗಿ, ಪ್ರಶಾಂತ ಜವಳಿ, ಶೀಲಾನಂತ ಬದೋಡಗಿ ಸದಸ್ಯ ರಾಜ್ಯ ಸರ್ಕಾರವು ನೇಕಾರರ ಬಗ್ಗೆ ನಿರ್ಲಕ್ಷ್ಯ ಧೋರಣೆ ವಹಿಸಿದೆ. ಶಾಲಾ ಸಮವಸöವನ್ನು ಕೆಎಚ್‌ಡಿಸಿ ಮೂಲಕ ನೇಕಾರರ ನೇಯ್ದ ಬಟ್ಟೆಗಳನ್ನು ವಿತರಿಸಬೇಕು, ಬಜೆಟ್‌ನಲ್ಲಿ ನೇಕಾರರ ಕ್ಷೇಮಾಭಿವೃದ್ಧಿಗೆ ೫ ಕೋಟಿ ರೂ. ಮೀಸಲಿಡಬೇಕು, ವೃತ್ತಿ ನೇಕಾರರ ವಿದ್ಯುತ್ ಬಿಲ್ ಸರ್ಕಾರ ಭರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.