ಮಳವಳ್ಳಿ: ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ವಿವಿಧ ಗ್ರಾಮಗಳ ಯುವಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ನೂರಕ್ಕೂ ಹೆಚ್ಚು ಯುವಕ, ಯುವತಿಯರು ಪಾಲ್ಗೊಂಡಿದ್ದರು. ಗುಂಪು ಆಟ ಕಬಡ್ಡಿಗೆ 30 ತಂಡ, ಖೋ ಖೋಗೆ 18, ವಾಲಿಬಾಲ್ 28, ಥ್ರೋಬಾಲ್ 10, ಫುಟ್‌ಬಾಲ್ 6 ತಂಡಗಳು ಭಾಗಿಯಾಗಿದ್ದವು. ಯುವಕ, ಯುವತಿಯರಿಗೆ ಪ್ರತ್ಯೇಕ ವಿಭಾಗದಲ್ಲಿ ಓಟ, ಉದ್ದ ಹಾಗೂ ಎತ್ತರ ಜಿಗಿತ, ಗುಂಡು ಎಸೆತ, ಡಿಸ್ಕಸ್ ಥ್ರೋ, ಜಾವಲಿನ್ ಥ್ರೋ ನಡೆದವು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಲೋಕೇಶ್, ಕ್ರೀಡಾಂಗಣ ಉಸ್ತುವಾರಿ ಅಧಿಕಾರಿ ಲಿಂಗರಾಜು, ದೈಹಿಕ ಶಿಕ್ಷಣ ಶಿಕ್ಷರಾದ ಎಂ.ಎಸ್.ಕೃಷ್ಣ, ಡಿ.ಮರಿಸ್ವಾಮಿ, ಪಂಕಜಾ, ಪ್ರಶಾಂತ್ ಕುಮಾರ್, ಮಾದೇಶ್, ದೇವಸೇನಾ ಭಾಗವಹಿಸಿದ್ದರು.