ಮುಂಡಗೋಡ: ತಾಲೂಕಿನ ಮಳಗಿಯಲ್ಲಿ ಶ್ರೀರಾಜರಾಜೇಶ್ವರೀ ವಿದ್ಯಾಸಂಸ್ಥೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀನಿಕೇತನ ಪೂರ್ವ ಪ್ರಾಥಮಿಕ ಶಾಲೆಯ ಸಾಂಸ್ಕೃಕೋತ್ಸವ ಇತ್ತೀಚೆಗೆ ಜರುಗಿತು.
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಶ್ರೀಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ ವಿದ್ಯಾರ್ಥಿಗಳ ಬೆಳವಣಿಗೆಗೆ ಶಿಕ್ಷಕರ ಮತ್ತು ಪಾಲಕರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಈ ವೇಳೆ ಶ್ರೀಗಳು ದಾನಿಗಳಿಗೆ ಸನ್ಮಾನಿಸಿ ಮಕ್ಕಳಿಗೆ ಬಹುಮಾನ ವಿತರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಎನ್.ಜಿ. ಹೆಗಡೆ ಭಟ್ರಕೇರಿ, ಕಾರ್ಯದರ್ಶಿ ಶಿವರಾಮ ಭಟ್ಟ, ಸದಸ್ಯರಾದ ಆರ್.ಎಸ್. ಹೆಗಡೆ, ಪ್ರಶಾಂತ್ ಭಟ್ಟ, ಜಿ.ಟಿ. ಭಟ್ಟ, ಗ್ರಾ.ಪಂ. ಅಧ್ಯಕ್ಷೆ ರೇಖಾ ಅಂಡಗಿ, ಪ್ರಮೋದ ಧವಳೆ, ಸೀತಾರಾಮ ಕಲ್ಕೂರ, ವಿದ್ಯಾ, ನಯನಾ ಪ್ರಾಚಾರ್ಯ ವಸಂತ್ ಭಟ್ಟ, ಶಿಕ್ಷಕರು ಮತ್ತು ಸಿಬ್ಬಂದಿ ಇದ್ದರು. ಅರವಿಂದಗುಡವಿ ಸ್ವಾಗತಿಸಿದರು. ಕೆ.ಎನ್. ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು. ಪ್ರವೀಣಾ ಹೆಗಡೆ ವರದಿ ವಾಚಿಸಿದರು. ನಯನಾ ಕೊಳಗಿ ನಿರೂಪಿಸಿದರು. ಪರಶುರಾಮ ಇಡಗೋಡ ವಂದಿಸಿದರು. ನಂತರ ಜರುಗಿದ ಸಾಂಸ್ಕೃಕ ಕಾರ್ಯಕ್ರಮಗಳು ಜನಮನ ರಂಜಿಸಿದವು.