ಜಿಲ್ಲೆ

ಮಳೆಗೆ ಮನೆ ಕುಸಿತ

reportermys

ಅರಸೀಕೆರೆ : ನಗರದ ಹಾಸನ ರಸ್ತೆ ಬಲಭಾಗಕ್ಕೆ ಹೊಂದಿಕೊಂಡಂತಿರುವ 6ನೇ ವಾರ್ಡ್‌ನ ಮೂರನೇ ತಿರುವಿನಲ್ಲಿರುವ ಆರ್.ಶಾಮು ಎನ್ನುವವರ ಮನೆ ಬುಧವಾರ ತಡರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದಿದೆ.

ನಗರಸಭೆ ಅಧ್ಯಕ್ಷ ಸಿ.ಗಿರೀಶ್, ಮುಖಂಡರಾದ ಶಿವನ್‌ರಾಜ್, ಸೂರ್ಯನ್ ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪರಿಹಾರದ ಭರವಸೆ ನೀಡಿದ್ದಾರೆ.