ಜಿಲ್ಲೆ

ಮಲ್ಲೇಶ್ವರ ಜಾತ್ರೆ 8ರಿಂದ 17ರವರೆಗೆ

ಚಿತ್ರದುರ್ಗ: ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನದಿಂದ ಮಾ. 8ರಿಂದ 17ರವರೆಗೆ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ, ವನಕಲ್ಲು ಶ್ರೀ ಪ್ರಶಸ್ತಿ ಪ್ರದಾನ, ಸಂಸ್ಕೃತೋತ್ಸವ, ಬ್ರಹ್ಮ ರಥೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾನದ ಪೀಠಾಧ್ಯಕ್ಷ ಡಾ. ಶ್ರೀ ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.

ಶನಿವಾರ ಜಾತ್ರೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಡಾಬಸ್ ಪೇಟೆಯ ಹೆಗ್ಗುಂದ ಸಮೀಪವಿರುವ ಮಠದಲ್ಲಿ 8ರಂದು ಜಾತ್ರೆಗೆ ಚಾಲನೆ ನೀಡಲಾಗುವುದು. ಅಂದು ಬೆಳಗ್ಗೆ ಮಲ್ಲೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಪಂಚಲೋಹದ ಕವಚಧಾರಣೆ, ಪುಷ್ಪಾಲಂಕಾರ ಸೇವೆ, ಶಿವರಾತ್ರಿ ಜಾಗರಣೆ ಇನ್ನಿತರೆ ಧಾರ್ಮಿಕ ಕಾರ್ಯ ನೆರವೇರಲಿದೆ ಎಂದು ಹೇಳಿದರು.

9ರಿಂದ 15ರವರೆಗೆ ಸಿದ್ಧಯೋಗಾನಂದ ಶ್ರೀ ಕ್ರಿಕೆಟ್ ಕಪ್ ಹಾಗೂ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ. 16ರಂದು ಬೆಳಗ್ಗೆ 11.30ಕ್ಕೆ ಪ್ರತಿಭೋತ್ಸವ, ಡೊಳ್ಳುಕುಣಿತ, ವೀರಗಾಸೆ, ಕರಡಿ ವಾದ್ಯ, ಭಜನೆ, ಸಾಂಸ್ಕೃತಿಕ ನಾಟಕೋತ್ಸವ, ಮುದ್ದೇನಹಳ್ಳಿ ಪಾಳ್ಯ ಗ್ರಾಮಸ್ಥರಿಂದ ಬೆಲ್ಲದ ಆರತಿ ಕಾರ್ಯಕ್ರಮ, ಸಂಜೆ 7.30ಕ್ಕೆ ಸಂಸ್ಕೃತ ಸಂಶೋಧನ ಉದ್ಘಾಟನೆ ನೆರವೇರಲಿದೆ ಎಂದರು.

17ರ ಬೆಳಗ್ಗೆ 10.30ಕ್ಕೆ ವನಕಲ್ಲು ಶ್ರೀ, ಜಗಜ್ಯೋತಿ, ವಿಶ್ವಜ್ಯೋತಿ, ಬಾಲಗಂಗಾಧರನಾಥ ನಿರ್ಮಲ ಜ್ಯೋತಿ, ಶರಣ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ವನಕಲ್ಲು ಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಜರುಗಲಿದೆ ಎಂದು ಮಾಹಿತಿ ನೀಡಿದರು.

ಮುಖಂಡರಾದ ಡಾ.ದೊಡ್ಡಮಲ್ಲಯ್ಯ, ಪ್ರತಾಪ್‌ಜೋಗಿ, ಲಕ್ಷ್ಮಿಕಾಂತ, ರಂಗಸ್ವಾಮಿ, ಅರುಣ್‌ಕುಮಾರ್, ಗೋವಿಂದ ಇತರರಿದ್ದರು.