ಜಿಲ್ಲೆ

ಮಲ್ಲೂರು ಮನೆ ಮೇಲೆ ಕುಸಿದು ಬಿದ್ದ ಗುಡ್ಡ

reportermng

ಮಂಗಳೂರು: ನಗರದ ಹೊರವಲಯದ ಮಲ್ಲೂರು ಜಂಕ್ಷನ್ ಬಳಿ ಝುಬೇರ್ ಎಂಬವರ ಮನೆ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.

ಬೀಪಾತುಮ್ಮ (72) ಗಾಯಾಳು. ಬೆಳಗ್ಗಿನ ಜಾವ 5.30 ರ ವೇಳೆಗೆ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದೆ. ಗೋಡೆ ಕೂಡಾ ಮನೆಯೊಳಗೆ ಕುಸಿದು ಬಿದ್ದಿದೆ. ಒಳಗೆ ಮಲಗಿದ್ದ ಬೀ ಪಾತುಮ್ಮ ಅವರ ಮೇಲೆ ಕಲ್ಲುಗಳು ಬಿದ್ದಿದೆ. ಕರಾವಳಿ ಭಾಗದಲ್ಲಿ ಕಳೆದ ಕೆಲದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭಾನುವಾರ ರಾತ್ರಿ ಕೂಡ ಬಿಡದೇ ಮಳೆ ಸುರಿದಿದೆ.