ಜಿಲ್ಲೆ

ಮಲ್ಲಾಪುರ ಕೆರೆಯಲ್ಲಿ ಇಬ್ಬರ ರಕ್ಷಣೆ

ಚಿತ್ರದುರ್ಗ: ಮಲ್ಲಾಪುರ ಕೆರೆಯಲ್ಲಿ ಮೀನುಗಳನ್ನು ಹಿಡಿಯಲು ಹೋಗಿ ಮಧ್ಯೆ ಸಿಲುಕಿಕೊಂಡಿದ್ದ ಮಲ್ಲಾಪುರ ಗ್ರಾಮದ ರಾಜಣ್ಣ, ಓಬಕ್ಕ ಇಬ್ಬರನ್ನೂ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಸೋಮವಾರ ರಕ್ಷಿಸಿದರು.

ದಂಪತಿಗಳಿಬ್ಬರು ಮೀನು ಹಿಡಿಯಲು ಮುಂದೆ, ಮುಂದೆ ಸಾಗುತ್ತ ಹೋಗಿ ಮಧ್ಯೆ ಸಿಲುಕಿದ್ದರು. ಕೆರೆಯಲ್ಲಿ ಅನುಪಯುಕ್ತ ಗಿಡಗಳು ಬೆಳೆದಿದ್ದರಿಂದ ಹೊರಗೆ ಬರಲು ಎಷ್ಟು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಕೆರೆಯಿಂದ ಹೊರಗೆ ತಂದರು.

ಅಗ್ನಿಶಾಮಕ ಠಾಣಾಧಿಕಾರಿ ಕೆ.ರಾಮಕೃಷ್ಣಪ್ಪ, ಸಿಬ್ಬಂದಿ ಇದ್ದರು.