ಜಿಲ್ಲೆ

ಮಲ್ಲಳ್ಳಿ ಫಾಲ್ಸ್ ರಸ್ತೆಯಲ್ಲಿ ಬರೆ ಕುಸಿತ

ಸೋಮವಾರಪೇಟೆ: ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಸೋಮವಾರಪೇಟೆ, ಹೆಗ್ಗಡಮನೆ, ಮಲ್ಲಳ್ಳಿ ಫಾಲ್ಸ್, ಪುಷ್ಪಗಿರಿ ದೇವಾಲಯಕ್ಕೆ ತೆರಳುವ ರಸ್ತೆಗೆ ಕುಮಾರಳ್ಳಿ ಗ್ರಾಮದ ಸಮೀಪದ ಬರೆ ಕುಸಿದಿದ್ದು ಗ್ರಾಮಸ್ಥರದಲ್ಲಿ ಆತಂಕ ಶುರುವಾಗಿದೆ.

ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಷ್ಪಗಿರಿ ತಪ್ಪಲು ಗ್ರಾಮಗಳಲ್ಲಿ ಹೆಚ್ಚು ಮಳೆ ಸುರಿಯುತ್ತಿದೆ. ಹೆಗ್ಗಡಮನೆ ಗ್ರಾಮದಲ್ಲಿ ಜನವರಿಯಿಂದ 100 ಇಂಚು ಮಳೆ ಸುರಿದಿದೆ. ಕುಮಾರಳ್ಳಿ, ಮಲ್ಲಳ್ಳಿ, ಮಾಲ್‌ಮನೆ, ಬೀದಳಿ, ಹಂಚಿನಳ್ಳಿ ಗ್ರಾಮಗಳಲ್ಲಿ 90 ಇಂಚಿನಷ್ಟು ಮಳೆಯಾಗಿದೆ. ಇನ್ನು ಎರಡು ತಿಂಗಳು ಮಳೆ ಸುರಿಯುವ ಸಂಭವವಿದೆ. ರಸ್ತೆ ಬದಿಯಲ್ಲಿ ಬರೆ ಕುಸಿಯಲು ಪ್ರಾರಂಭಿಸಿದರೆ, ಅನೇಕ ಗ್ರಾಮಗಳು ಪಟ್ಟಣದ ಸಂಪರ್ಕ ಕಳೆದುಕೊಳ್ಳಬೇಕಾದ ಸಾಧ್ಯತೆ ಒದಗಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಕಂದಾಯ ಇಲಾಖೆ ಕೂಡಲೆ ಪರಿಶೀಲನೆ ನಡೆಸಿ, ಬರೆ ಕುಸಿಯುವ ಜಾಗಗಳನ್ನು ಗುರುತಿಸಿ, ವೈಜ್ಞಾನಿಕವಾಗಿ ಎಂಸ್ಯಾಂಡ್ ಚೀಲಗಳನ್ನು ಇಟ್ಟು ಭದ್ರಪಡಿಸಬೇಕಿದೆ ಎಂದು ಕೃಷಿಕ ಹರೀಶ್ ಹೇಳಿದ್ದಾರೆ.