ಹಾಸನ: ಜಿಲ್ಲೆಯ ಪ್ರತಿಷ್ಠತ ಕಾಲೇಜು ಎಂದು ಹೆಸರುವಾಸಿಯಾಗಿರುವ ಮಲೆನಾಡು ತಾಂತ್ರಿಕ ಮಹಾ ವಿದ್ಯಾಲಯದ ಮೊಟ್ಟ ಮೊದಲ ದಲಿತ ಪ್ರಾಂಶುಪಾಲರಾಗಿ ಎ.ಜೆ. ಕೃಷ್ಣಯ್ಯ ಅವರು ಸೋಮವಾರ ಅಧಿಕಾರ ಸ್ವೀಕಾರ ಮಾಡಿದರು
ನಗರದ ಸಾಲಗಾಮೆ ರಸ್ತೆಯಲ್ಲಿರುವ ಕಾಲೇಜಿನಲ್ಲಿ ಕಳೆದ ಅನೇಕ ದಿನಗಳಿಂದ ವಿವಾದದ ಸುಳಿಯಲ್ಲಿ ಇದ್ದ ಪ್ರಾಂಶುಪಾಲರ ನೇಮಕ ಪ್ರಕ್ರಿಯೆ ಕೊನೆಗೂ ಸುಖಾಂತ್ಯ ಖಂಡಿದ್ದು. ಜೇಷ್ಠತೆಯ ಆಧಾರದಲ್ಲಿ ನೇಮಕ.ಮಾಡಲು ಆಡಳಿತ ಮಂಡಳಿ ತೀರ್ಮಾನ ಮಾಡಲಾಯಿತು.
ಜೇಷ್ಠತೆಯಲ್ಲಿ ಕೃಷ್ಣಯ್ಯ ಅವರನ್ನು ಪ್ರಾಂಶುಪಾಲರಾಗಿ ನೇಮಕ ಮಾಡಬೇಕು ಎಂದು ಈ ಹಿಂದೆಯೇ ತೀರ್ಮಾನ ಮಾಡಲಾಗಿತ್ತು ಆದರೆ ಈ ಹಿಂದೆ ಇದ್ದ ಪ್ರಾಂಶುಪಾಲ ಪ್ರದೀಪ್ ತಮ್ಮ ಸ್ಥಾನ ಬಿಟ್ಟು ಕೊಡಲು ನಿರಾಕರಿಸಿದ್ದರು. ಸೋಮವಾರ ಕಾಲೇಜಿನ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಸಭೆ ಸೇರಿ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಪ್ರದೀಪ್ ಅವರ ಸ್ಥಾನಕ್ಕೆ ಕೃಷ್ಣಯ್ಯ ಅವರನ್ನು ನೇಮಕ ಮಾಡಲಾಯಿತು.
ಆದರೆ ಈ ಹಿಂದೆ ಇದ್ದ ಪ್ರಾಂಶುಪಾಲರಾದ ಪ್ರದೀಪ್ ವಿಷಯ ತಿಳಿದ ತಕ್ಷಣ ಕಾಲೇಜಿಗೆ ರಜೆ ಹಾಕಿ, ಎಲ್ಲಾ ಕೊಠಡಿಗಳ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದರು. ನಂತರ ಎಲ್ಲಾ ನಿರ್ದೇಶಕರ ಸಮ್ಮುಖದಲ್ಲಿ ಕೊಠಡಿಗಳ ಬೀಗ ಹೊಡೆದು ಒಳ ಪ್ರವೇಶ ಮಾಡಲಾಯಿತು.