ತಾಲ್ಲೂಕಿನ ಮರ್ಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರೂಪ ಎಸ್.ಚಿಕ್ಕೇಗೌಡ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. 
ಜಿಲ್ಲೆ

ಮರ್ಲೆ ಗ್ರಾಪಂ ಅಧ್ಯಕ್ಷರಾಗಿ ರೂಪ ಅವಿರೋಧ ಆಯ್ಕೆ

ಚಿಕ್ಕಮಗಳೂರು: ತಾಲ್ಲೂಕಿನ ಮರ್ಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರೂಪ ಎಸ್.ಚಿಕ್ಕೇಗೌಡ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಕುಮಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಅಭಿನಂದನೆ ಸಲ್ಲಿಸಿ ಮಾತನಾಡಿದ ಜಿ.ಪಂ. ಮಾಜಿ ಸದಸ್ಯ ಕೆ.ವಿ.ಮಂಜುನಾಥ್ ಸದಸ್ಯರು ಮತ್ತು ಗ್ರಾ ಮಸ್ಥರ ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಸಾಕಷ್ಟು ಅಭಿವೃದ್ದಿ ಸಾಧಿಸಿ ಪಂಚಾಯಿ ತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ರೂಪಿಸಬಹುದು ಎಂದು ತಿಳಿಸಿದರು.

ಗ್ರಾ.ಪಂ.ನಲ್ಲಿ ಹಿಂದೆ ಆಡಳಿತ ನಡೆಸಿದ ಅಧ್ಯಕ್ಷರು ಹಾಗೂ ಅಧಿಕಾರಿ ವರ್ಗದವರ ಸಹಕಾರ ಪಡೆದು ಮುಂದಿನ ದಿನಗಳಲ್ಲಿ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ಹಳ್ಳಿಗಳಲ್ಲಿ ಕುಡಿಯುವ ನೀರು, ಸ್ವಚ್ಚತೆ, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದರು.

ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಸದಸ್ಯ ಬಸವರಾಜ್ ಮಾತನಾಡಿ ಸರಕಾರದಿಂದ ಬರುವ ಅನುದಾ ನಗಳನ್ನು ಎಲ್ಲಾ ಸದಸ್ಯರಿಗೂ ಸಮಾನವಾಗಿ ಹಂಚಿಕೆ ಮಾಡುವುದರ ಜೊತೆಗೆೆ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವುದರ ಮೂಲಕ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲು ಹೆಚ್ಚಿನ ಆಧ್ಯತೆ ನೀಡಬೇಕು ಎಂದರು.

ನೂತನ ಅಧ್ಯಕ್ಷ ರೂಪ.ಎಸ್ ಚಿಕ್ಕೇಗೌಡ ಮಾತನಾಡಿ ಸರ್ವಸದಸ್ಯರ ಸಹಕಾರದಿಂದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿದ್ದು, ಎಲ್ಲಾರಿಗೂ ಕೃತಜ್ಞತೆ ಸಲ್ಲಿಸಿದರು. ತಮ್ಮ ಅವ ಧಿಯಲ್ಲಿ ಪಕ್ಷಾತೀತವಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಂಬಳೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ವಿಜಯ್‌ಕುಮಾರ್, ಗ್ರಾ.ಪಂ. ಉಪಾಧ್ಯಕ್ಷೆ ಲೀಲಾವತಿ, ಸದಸ್ಯರುಗಳಾದ ವೆಂಕಟಮ್ಮ, ಎಂ.ಎಸ್.ಚAದ್ರಪ್ಪ, ಭಾಗ್ಯ, ಎಂ.ಈ.ಸುರೇಶ್, ಹೂವಮ್ಮ, ಜ ಯಂತಿ, ಜೆ.ಸಿ.ಬಸವರಾಜು, ಎಂ.ಈ.ರಾಜು, ಸುಧಾ, ಟಿ.ಎಸ್.ಜಗದೀಶ್, ಗೌರಮ್ಮ, ಎಂ.ಎಸ್.ರಮೇಶ್, ಕೆ.ಪಿ.ಶ್ರೀಧರ್, ಗ್ರಾಮಸ್ಥರಾದ ಭೀಮಯ್ಯ, ದಾಸೇಗೌಡ ಮತ್ತಿತರರಿದ್ದರು.