ಜಿಲ್ಲೆ

ಮರಾಠಾ ಸಮಾಜವನ್ನು 2ಎಗೆ ಸೇರಿಸಲು ಒತ್ತಾಯ

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿಂದು ಮರಾಠಾ ಸಮುದಾಯವನ್ನು ಹಿಂದುಳಿದ 3ಬಿಯಿಂದ 2ಎ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ವತಿಯಿಂದ ಬುಧವಾರ ಸರ್ಕಾರವನ್ನು ಒತ್ತಾಯಿಸಲಾಯಿತು.
ಮರಾಠಾ ಸಮಾಜ ರಾಜ್ಯದಲ್ಲಿ ಸುಮಾರು 45 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೂ ಸಮಾಜ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಸರ್ಕಾರ ಇತ್ತೀಚೆಗೆ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಹೆಚ್ಚುವರಿ ಮೀಸಲಾತಿ ಕಲ್ಪಿಸಿದೆ. ಮರಾಠಾ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಸರ್ಕಾರವನ್ನು ಹಲವು ಬಾರಿ ಒತ್ತಾಯಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಕೂಡಲೇ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಮರಾಠಾ ಪರಿಷತ್ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ಸುಭಾಷ ಶಿಂಧೆ, ಶಂಕರ ಶೇಳಕೆ, ಕೆ.ವಿ. ಭೋಸಲೆ, ಸಿ.ಎನ್. ಪವಾರ, ರಾಜು ಕಾಳೆ, ಈಶ್ವರ ಪಾಟೀಲ, ಪ್ರಮೋದ ಬಾಗಿಲದ, ತಾನಾಜಿ ರೋಖಡೆ, ಸಚಿನ್ ಚವ್ಹಾಣ, ಪವನ್ ಘಾಟಗೆ, ಎಂ.ಎನ್. ಜಾಧವ, ಭರತ್ ಸಾವಂತ, ಕೃಷ್ಣಾ ಕಾಳೆ, ಸಂತೋಷ ಬಿರ್ಜನ್ನವರ, ಸುನೀಲ ಮೋರೆ, ಮಂಜು ಭೋಸಲೆ, ಪ್ರಕಾಶ ಜಮದಾಳೆ, ಸಿದ್ದುರಾವ್ ಭೋಸಲೆ, ಇತರರಿದ್ದರು.