ರಾಮದುರ್ಗ: ಜಿಲ್ಲೆಯ ಮರಾಠ ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ನಿರಂತರವಾಗಿ ಶ್ರಮಿಸುತ್ತೇನೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಪಟ್ಟಣದ ಭವಾನಿ ನಗರದಲ್ಲಿ ನಿರ್ಮಿಸಲಾದ ಮರಾಠ ಅರ್ಬನ್ ಕೋ&ಆಪರೇಟಿವ್ ಸೊಸೈಟಿ ಕಟ್ಟಡ ಉದ್ಘಾಟನೆ ಹಾಗೂ ಸೊಸೈಟಿಯ 24ನೇ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಮದುರ್ಗ ಪಟ್ಟಣದಲ್ಲಿ 24 ವರ್ಷಗಳ ಹಿಂದೆ ಆರಂಭಿಸಿದ ಮರಾಠ ಸೊಸೈಟಿಯು ಎರಡು ಉಪಶಾಖೆಗಳೊಂದಿಗೆ ಆರ್ಥಿಕ ಸುಧಾರಣೆಗೆ ಮುಂದಾಗಿದೆ. ಜತೆಗೆ ಸ್ವಂತ ಕಟ್ಟಡದಲ್ಲಿ ಇಂದು ಕಾರ್ಯನಿರ್ವಹಿಸುತ್ತಿರುವುದು ಶ್ಲಾನೀಯ ಎಂದರು.
ಸಾನ್ನಿಧ್ಯ ವಹಿಸಿದ್ದ ಬೆಂಗಳೂರು ಗವಿಪುರಂನ ಗೋಸಾಯಿ ಮರಾಠ ಮಠದ ಭವಾನಿ ಪೀಠದ ಮಂಜುನಾಥ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಮರಾಠ ಅರ್ಬನ್ ಕೊ&ಅಪ್&ಕ್ರೆಡಿಟ್ ಸೊಸೈಟಿ ಅಧ್ಯ ಪಿ.ಎಂ.ಜಗತಾಪ ಅಧ್ಯತೆ ವಹಿಸಿದ್ದರು. 50 ವರ್ಷ ಪೂರೈಸಿದ ತ್ರಿಯ ದಂಪತಿ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಂಜುನಾಥ ಭಾರತಿ ಸ್ವಾಮೀಜಿ ಅವರನ್ನು ಪೂರ್ಣ ಕುಂಭ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಮೆರವಣಿಗೆ ಮೂಲಕ ಸುಮಂಗಲೆಯರು ಸ್ವಾಗತಿಸಿದರು. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯ ಮಲ್ಲಣ್ಣ ಯಾದವಾಡ, ಮುಖಂಡ ಎಸ್.ಆರ್. ಸಿಂಧ್ಯಾ, ಅಶ್ವತ್ಥ ನಾರಾಯಣ ಜಾಧವ, ಸುರೇಶ ಲಾಡ್, ರವಿ ಸಾವಂತ, ಸಂಬಾಜಿ ರಾವ, ವಿ.ವಿ. ತುಳಸಿಗೇರಿ, ಡಾ.ವೆ.ಬಿ. ಕುಲಗೋಡ, ತಾನಾಜಿ ಮುರಂಕರ, ಅಶೋಕ ಅಂಗಡಿ, ಪುಂಡಲೀಕ ಬಾಳೋಜಿ ಸೇರಿ ಸಮುದಾಯದ ಮುಖಂಡರು, ಸೊಸೈಟಿ ಕಾರ್ಯಕಾರಿ ಮಂಡಳಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಎಸ್.ಪಿ.ಮುರಾರಿ ಪ್ರಾಸ್ತಾವಿಕ ಮಾತನಾಡಿದರು. ನವೀನ ನಲವಡೆ ಸ್ವಾಗತಿಸಿದರು. ವಿಜಯ ಮೋಹಿತೆ ನಿರೂಪಿಸಿದರು. ಗಂಗಾಧರ ಭೋಸಲೆ ವಂದಿಸಿದರು.