ಹನೂರು: ಪಟ್ಟಣದಿಂದ ಅಜ್ಜೀಪುರ ಗ್ರಾಮಕ್ಕೆ ತೆರಳುವ ಮಾರ್ಗಮಧ್ಯೆ ಗುರುವಾರ ಮರದ ಚಕ್ಕೆ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬೆಳಗ್ಗೆ ಮಳವಳ್ಳಿಯಿಂದ ತಮಿಳುನಾಡಿನ ಪೇಪರ್ ಫ್ಯಾಕ್ಟರಿಗೆ ಮರದ ಚಕ್ಕೆಯನ್ನು ತುಂಬಿಕೊಡು ತೆರಳುತ್ತಿದ್ದ ಲಾರಿ, ಅಜ್ಜೀಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಪರಿಣಾಮ ಲಾರಿ ಮಗುಚಿದ್ದು, ಲಾರಿಯಲ್ಲಿದ್ದ ಮರದ ಚಕ್ಕೆ ನೆಲದ ಪಾಲಾಯಿತು. ಸದ್ಯ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.