ಎನ್.ಆರ್.ಪುರ: ನಮ್ಮ ಪೂರ್ವಜರು ತಾಯಿ ಹಾಲಿಗೆ ಹೆಚ್ಚು ಮಹತ್ವ ನೀಡಿದ್ದರು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಮಹೇಂದ್ರ ಕಿರೀಟಿ ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಮಾತನಾಡಿ, ಶಿಶು ಮರಣ, ತಾಯಿ ಮರಣ ತಗ್ಗಿಸಬೇಕು ಎಂಬುದೇ ವಿಶ್ವ ಸ್ತನ್ಯಪಾನ ಸಪ್ತಾಹದ ಉದ್ದೇಶ ಎಂದರು.
ಪಪಂ ಅಧ್ಯಕ್ಷೆ ಜುಬೇದಾ ಮಾತನಾಡಿ, ತಾಯ್ತನ ಎಂಬುದು ಮಹಿಳೆಯರಿಗೆ ದೇವರು ಕೊಟ್ಟ ವರ. ಇದನ್ನು ಮಹಿಳೆಯರು ಸಂಭ್ರಮಿಸಬೇಕು. ಒತ್ತಡದ ಬದುಕಿನಲ್ಲಿ ಮಗುವಿಗೆ ಹಾಲನ್ನು ಸಮಯಕ್ಕೆ ಸರಿಯಾಗಿ ನೀಡುವುದು ಮಹಿಳೆಯರಿಗೆ ಸಾಧ್ಯವಾಗುತ್ತಿಲ್ಲ. ಗರ್ಭಿಣಿಯರು, ಬಾಣಂತಿಯರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದು ತಿಳಿಸಿದರು.
ಹೆರಿಗೆ ತಜ್ಞೆ ಡಾ. ಚಂದ್ರಪ್ರಭಾ, ಡಾ. ಪ್ರಭು, ಹಿರಿಯ ಶುಶ್ರೂಷಕ ಅಧಿಕಾರಿ ಜಾಸ್ಮಿನ್, ಪಿ.ಪಿ.ಬೇಬಿ, ಶಿಲ್ಪಾ, ರೇಣುಕಾ, ಕಣಿವೆ ವಿನಯ್, ಭವ್ಯಾ ಸಂತೋಷ್, ದಿನೇಶ್, ಕುಮಾರ್ ಇದ್ದರು.