ಕೆರೂರ ಪಟ್ಟಣದ ಮರ್ಚಂಟ್ಸ್ ಕೋ-ಆಪ್ ಕ್ರೆಡಿಟ್ ಸೊಸೈಟಿ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಧನಂಜಯ ಕಂದಕೂರ ಮಾತನಾಡಿದರು. ಸಂಘದ ಉಪಾಧ್ಯಕ್ಷ ಜಗದೀಶ ಯಂಡಿಗೇರಿ, ಆಡಳಿತ ಮಂಡಳಿ ಸದಸ್ಯರಾದ ಸುಭಾಸ ಪೂಜಾರ, ಶಂಕ್ರಪ್ಪ ಘಟ್ಟದ, ಕೇಶವ ಕಂದಕೂರ ಇತರರಿದ್ದರು. 
ಜಿಲ್ಲೆ

ಮರ್ಚಂಟ್ಸ್ ಸೊಸೈಟಿಗೆ 95 ಲಕ್ಷ ರೂ.ನಿವ್ವಳ ಲಾಭ

ಕೆರೂರ: ಪಟ್ಟಣದ ಮರ್ಚಂಟ್ಸ್ ಕೋ-ಆಪ್ ಕ್ರೆಡಿಟ್ ಸೊಸೈಟಿ 2022-23ನೇ ಸಾಲಿನ ಹಣಕಾಸು ವರ್ಷದಲ್ಲಿ 95 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಧನಂಜಯ ಕಂದಕೂರ ಹೇಳಿದರು.
ಸಂಘದ ಪ್ರಧಾನ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 28ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ಸಂಘವು 27 ವರ್ಷ ಪೂರ್ಣಗೊಳಿಸಿ 28ನೇ ವರ್ಷದಲ್ಲಿ ಕಾಲಿಡುವ ಜತೆಗೆ ಯಶಸ್ವಿಯಾಗಿ 2 ಶಾಖೆಗಳೊಂದಿಗೆ ಮುನ್ನಡೆದಿದೆ. ಸಂಘದಲ್ಲಿ ಒಟ್ಟು ಸದಸ್ಯರ ಸಂಖ್ಯೆ 3871ಇದ್ದು, 78 ಲಕ್ಷ ರೂ. ಷೇರು ಹಣ ಸಂಗ್ರಹವಾಗಿದೆ. ಒಟ್ಟು ಠೇವು 31.70 ಕೋಟಿ ರೂ., ದುಡಿಯುವ ಬಂಡವಾಳ 41.47 ಕೋಟಿ ರೂ., ಸಾಲ ಪೂರೈಕೆ ಹಣ 21.96 ಕೋಟಿ ಹಾಗೂ ಗ್ರಾಹಕರಿಗೆ 12% ಡಿವಿಡೆಂಡ್ ಹಂಚಲಾಗಿದೆ ಎಂದು ತಿಳಿಸಿದರು.
ಸಂಘದ ನಿರ್ದೇಶಕ ಗಂಗಾಧರ ಘಟ್ಟದ ಮಾತನಾಡಿ, ಗ್ರಾಹಕರು ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ಸಕಾಲಕ್ಕೆ ಮರುಪಾವತಿ ಮಾಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಗ್ರಾಹಕರು ನಮ್ಮ ಬ್ಯಾಂಕಿನ ಮೇಲೆ ಇಟ್ಟ ವಿಶ್ವಾಸ ಶ್ರದ್ಧೆ ಹಾಗೂ ಸಹಕಾರವೇ ಈ ಪ್ರಗತಿಗೆ ಕಾರಣ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಬ್ಯಾಂಕಿನ ಸದಸ್ಯತ್ವ ಹೊಂದಿದ ಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ಉಪಾಧ್ಯಕ್ಷ ಜಗದೀಶ ಯಂಡಿಗೇರಿ, ಆಡಳಿತ ಮಂಡಳಿ ಸದಸ್ಯರಾದ ಸುಭಾಸ ಪೂಜಾರ, ಶಂಕ್ರಪ್ಪ ಘಟ್ಟದ, ಕೇಶವ ಕಂದಕೂರ, ಗುರಪ್ಪ ಬಾಗೋಜಿ, ಪ್ರವೀಣ ಮಾನ್ವಿ, ಬಾಬು ರಾಮದುರ್ಗ, ಪ್ರಕಾಶ ಮೇದಾರ, ದಾನಪ್ಪ ಪೂಜಾರ, ರತ್ನವ್ವ ಕಡಕೊಳ, ತಾರಾ ಹಂದ್ರಾಳ, ಮುಖ್ಯ ನಿರ್ವಾಹಕ ರುದ್ರಪ್ಪ ಅಳಗವಾಡಿ ಹಾಗೂ ಸಿಬ್ಬಂದಿ ವರ್ಗದವರಿದ್ದರು.