ಲಿಂಗದಹಳ್ಳಿ: ಹೋಬಳಿಯ ಮುಳ್ಳತ್ತಿಬೈಲು ಗ್ರಾಮದ ರಸ್ತೆ ಬದಿಯಲ್ಲಿದ್ದ ಹುಣಸೆ ಮರ ಸೋಮವಾರ ಬಿದ್ದಿದ್ದರಿಂದ ವಿದ್ಯುತ್ ಕಂಬ ಹಾಗೂ ಲಾರಿಗೆ ಹಾನಿಯಾಗಿದೆ.
ಹುಣಸೆ ಮರ ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಮರದ ಕೆಳಗೆ ನಿಲ್ಲಿಸಿದ್ದ ಲಾರಿಯೂ ಜಖಂಗೊಂಡಿದೆ. ವಿದ್ಯುತ್ ಕಂಬ ಮುರಿದು ಬಿದ್ದಿದ್ದರಿಂದ ತಣಿಗೆಬೈಲು, ಹುಣಸೆಬೈಲು, ದೂಪದ ಖಾನ್, ಕೆಮ್ಮಣ್ಣಗುಂಡಿ, ನಂದಿಗಾವೆ, ದಂಡುಬಿಟ್ಟಹಾರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರಲಿಲ್ಲ. ಲಿಂಗದಹಳ್ಳಿ ಮೆಸ್ಕಾಂ ವಿಭಾಗದ ಇಂಜಿನಿಯರ್ ತಿಪ್ಪೇಶ್ ಮತ್ತು ಸಿಬ್ಬಂದಿ ಮಂಗಳವಾರ ಹೊಸ ವಿದ್ಯುತ್ ಕಂಬ ನೆಟ್ಟು, ವಿದ್ಯುತ್ ತಂತಿಗಳನ್ನು ಸರಿಪಡಿಸಿ ವಿದ್ಯುತ್ ಸರಬರಾಜಿನ ವ್ಯವಸ್ಥೆ ಮಾಡಿದರು.